ಬಂಟ್ವಾಳ | ಮಾ.10 ರಂದು ನಾರಾಯಣ ಗುರು ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮ

Update: 2025-03-09 11:29 IST
Photo of Press meet
  • whatsapp icon

ಬಂಟ್ವಾಳ : ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಮಾಣಿ ಇದರ ನೂತನ ನಿವೇಶನದಲ್ಲಿ ಶ್ರೀ ನಾರಾಯಣಗುರು ಮಂದಿರ, ಶ್ರೀ ಅನ್ನಪೂರ್ಣೇಶ್ವರಿ ಗುಡಿ ಮತ್ತು ಶ್ರೀ ನಾರಾಯಣ ಗುರು ಸಮುದಾಯ ಭವನದ ಶಿಲಾನ್ಯಾಸ ಹಾಗೂ ಶ್ರೀ ನಾರಾಯಣಗುರು ಸಹಕಾರ ಸಂಘ ( ನಿ.) ಮಾಣಿ ಇದರ ಉದ್ಘಾಟನಾ ಕಾರ್ಯಕ್ರಮ ಮಾ.10 ರಂದು ಮಾಣಿಯಲ್ಲಿ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ಈಶ್ವರ ಪೂಜಾರಿ ತಿಳಿಸಿದರು.

ಬಿ.ಸಿ.ರೊಡ್ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 1.10 ಎಕ್ರೆ ಜಾಗದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಮಾ.10 ರಂದು 8.30 ರಿಂದ ಗಣಹೋಮ, ಶಿಲಾನ್ಯಾಸ ಪೂಜಾ ಕಾರ್ಯಕ್ರಮಗಳು ಶ್ರೀ ಸಾಯಿಶಾಂತಿ ಮಣಿನಾಲ್ಕೂರು ಮತ್ತು ಸುರೇಶ್ ಶಾಂತಿ ಮಿತ್ತೂರು ದರ್ಬೆ ಇವರ ಪೌರೋಹಿತ್ಯದಲ್ಲಿ ನಡೆಯಲಿರುವುದು, ಶಿಲಾನ್ಯಾಸ ಕಾರ್ಯಕ್ರದಲ್ಲಿ ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಿಲಿದ್ದಾರೆ ಎಂದು ತಿಳಿಸಿದರು.

ಕಟ್ಟಡ ಸಮಿತಿ ಅಧ್ಯಕ್ಷ ನಾರಾಯಣ ಸಾಲ್ಯಾನ್, ಕೋಶಾಧಿಕಾರಿ ಚಂದ್ರಶೇಖರ್ ಪೂಜಾರಿ, ಗ್ರಾಮ ಸಮಿತಿ ಪ್ರಮುಖರಾದ ಲೋಕೇಶ್ ಬಂಗೇರ ಮಾಣಿ, ಸಮಿತಿ ಸದಸ್ಯ ಸತೀಶ್ ಪೂಜಾರಿ ಕೊಪ್ಪರಿಗೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News