ಬಿ.ಸಿ.ರೋಡು: ಮಟ್ಕಾ ಅಡ್ಡೆಗೆ ಪೊಲೀಸ್ ದಾಳಿ; ಇಬ್ಬರ ಬಂಧನ

Update: 2025-03-19 11:09 IST
ಬಿ.ಸಿ.ರೋಡು: ಮಟ್ಕಾ ಅಡ್ಡೆಗೆ ಪೊಲೀಸ್ ದಾಳಿ; ಇಬ್ಬರ ಬಂಧನ
  • whatsapp icon

ಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಆಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೋಲಿಸರು ಇಬ್ಬರನ್ನು ಬಂಧಿಸಿದ ಘಟನೆ ಬಿ.ಸಿ.ರೋಡು ಸಮೀಪದ ಕೈಕಂಬ ಎಂಬಲ್ಲಿ ನಡೆದಿದೆ.

ಬಂಟ್ವಾಳ ಮೂಡ ಗ್ರಾಮದ ಕೈಕಂಬದಲ್ಲಿ ಖಾಸಗಿ ಕಟ್ಟಡವೊಂದರ ಬಳಿಯಲ್ಲಿ ಆಟಕ್ಕೆ ತಯಾರು ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಪೋಲೀಸರು ಪ್ರಮುಖ ಆರೋಪಿಗಳಾದ ನಾವೂರ ನಿವಾಸಿ ಸುರೇಶ್ ಹಾಗೂ ಮಿತ್ತಬೈಲು ನಿವಾಸಿ ಭಾಸ್ಕರ ಎಂಬವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 3,500 ರೂ ನಗದು ಹಾಗೂ ಆಟಕ್ಕೆ ಬಳಸಿದ ಮಟ್ಕಾ ಎಲೆ, ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಟ್ವಾಳ ‌ನಗರ ಪೋಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News