ಮಂಗಳೂರು: ಬ್ಯಾರೀಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ʼಸಂವಿಧಾನ ದಿನಾಚರಣೆʼ
ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)ಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮತ್ತು ಬಿಐಟಿ NSS ಸಹಯೋಗದೊಂದಿಗೆ “ನನ್ನ ಸಂವಿಧಾನ, ನನ್ನ ಹೆಮ್ಮೆ” ಎಂಬ ಶೀರ್ಷಿಕೆಯಡಿಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಂತರಾಷ್ಟ್ರೀಯ ಸೆಮಿನಾರ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಎಸ್ ಡಿಎಂ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಪುಷ್ಪರಾಜ್ ಮಾತನಾಡಿದ್ದು, ಪ್ರಗತಿಪರ ಮತ್ತು ಅಂತರ್ಗತ ಸಮಾಜವನ್ನು ರೂಪಿಸುವಲ್ಲಿ ಸಾಂವಿಧಾನಿಕ ತತ್ವಗಳ ಮಹತ್ವದ ಬಗ್ಗೆ ಅರಿವನ್ನು ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಬಿಐಟಿಯ ಪ್ರಾಂಶುಪಾಲರಾದ ಡಾ. ಎಸ್ ಐ ಮಂಝೂರ್ ಬಾಷಾ ಉದ್ಘಾಟನಾ ಭಾಷಣ ಮಾಡಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ವಸಂತಕುಮಾರ್ ಸ್ವಾಗತಿಸಿದ್ದು, ಬಿಐಟಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮೊಹಮ್ಮದ್ ಕಫೀಲ್ ದೆಲ್ವಿ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಭಾಗವಹಿಸಿದ್ದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸಂದೀಪ್ ನಂಬಿಯಾರ್ ಎಸ್ ಧನ್ಯವಾದವನ್ನು ಸಲ್ಲಿಸಿದ್ದು, ಮೆಕ್ಯಾನಿಕಲ್ ವಿಭಾಗದ 3ನೇ ಸೆಮಿಸ್ಟರ್ ನ ವಿದ್ಯಾರ್ಥಿ ಸೈಫುಲ್ಲಾ ಕಾರ್ಯಕ್ರಮವನ್ನು ನಿರೂಪಿಸಿದ್ದಾರೆ.