ಮುಂದಿನ 30-40 ವರ್ಷಗಳ ದೂರದೃಷ್ಠಿಯಿಂದ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ: ಸ್ಪೀಕರ್ ಯು.ಟಿ.ಖಾದರ್
ಉಳ್ಳಾಲ : ಮುಂದಿನ 30-40ವರ್ಷಗಳ ದೂರದೃಷ್ಠಿಯಿಂದ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ, ಅದರಲ್ಲಿ ಮುಖ್ಯವಾದದ್ದು ಕೋಟೆಕಾರಿನಲ್ಲಿ 33\11ಕೆವಿ ಉಪಕೇಂದ್ರ ನಿರ್ಮಾಣವಾಗುತ್ತಿರುವ ಉಪಕೇಂದ್ರದಿಂದ ಈ ಪರಿಸರದ ಜನರ ವಿದ್ಯುತ್ ಶಕ್ತಿ ಸಮಸ್ಯೆ ಕಡಿಮೆ ಆಗಲಿದೆ, ತೊಕ್ಕೋಟ್ಟು ಉಪಕೇಂದ್ರ 110ಕೆ.ವಿಯ ಮೇಲ್ದರ್ಜೆಗೆ ಯೋಜನೆಗೆ ತಾಂತ್ರಿಕ ಅನುಮೊದನೆ ಆಗಿರುತ್ತದೆ ಕೊಣಾಜೆಯಲ್ಲಿ ಹೆಚ್ಚುವರಿ ಹೊಸ ಉಪವಿಭಾಗ ಕಚೇರಿ, ಅದಕ್ಕೆ ಸಂಭಂದಿಸಿದ ಹಾಗೆ ಮುಡಿಪು ಬೋಳಿಯಾರ್, ಕಿನ್ಯ ಉಪ ವಿಭಾಗ ಕಚೇರಿಗಳ ರಚನೆಯಾಗಿ ಜನರಿಗೆ ಅನುಕೂಲವಾಗಲಿದೆ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ, ರಾಜ್ಯ ವಿಧಾನ ಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಕೋಟೆಕಾರಿನಲ್ಲಿ ನಿರ್ಮಾಣ ಆಗುತ್ತಿರುವ ವಿದ್ಯುತ್ ಉಪಕೇಂದ್ರ ಮತ್ತು ಕಚೇರಿ ಕಾಮಗಾರಿಗಳ ವೀಕ್ಷಣೆ ನಡೆಸಿ ಮಾತನಾಡಿದ ಅವರು ಜನರಿಗೆ ವಿದ್ಯುತ್ ಶಕ್ತಿ, ಕುಡಿಯುವ ನೀರು, ರಸ್ತೆ ಮುಂತಾದ ಮೂಲ ಭೂ ಸೌಕರ್ಯಗಳ ಅಭಿವೃದ್ಧಿ ಯೋಜನೆಯಾಗಿ ಮುಂದಿನ 30-40ವರ್ಷಗಳ ದೂರದೃಷ್ಠಿಯಿಂದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಂಗಳೂರು ವಿದ್ಯುತ್ ಶಕ್ತಿ ಸರಬರಾಜು ಕಂಪೆನಿ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕ ಪದ್ಮಾವತಿ ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದರು.
ಮೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕ ಎಚ್.ಜಿ ರಮೇಶ್, ಮಂಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಕೆ, ಪ್ರಭಾರ ಮುಖ್ಯ ಇಂಜಿನಿಯರ್ ಚೈತನ್ಯ, ಉಳ್ಳಾಲ ಮೆಸ್ಕಾಂ ಸಹಾಯಕ ಇಂಜಿನಿಯರ್ ದಯಾನಂದ್, ಜೂನಿಯರ್ ಇಂಜಿನಿಯರ್ ರಾಜೇಶ್, ನಿತೇಶ್ ಹೊಸಗದ್ದೆ ಹಾಗೂ ಇಲಾಖಾ ಅಧಿಕಾರಿಗಳು, ಸಿಬ್ಬಂಧಿಗಳು ಹಾಗೂ ಅಖಿಲ ಭಾರತ ತಿಯಾ ಸಮಾಜದ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ಚೀರುಂಭ ಭಗವತೀ ಕ್ಷೇತ್ರದ ಉಪಾಧ್ಯಕ್ಷ ಸುರೇಶ್ ಭಟ್ನಗರ, ಹಾಗೂ ಹರ್ಷರಾಜ್ ಮುದ್ಯ, ರೇಣುಕಾ ಶೆಟ್ಟಿ, ಚಂದ್ರಿಕಾ ರೈ, ದಿನೇಶ್ ರೈ, ಹಮೀದ್ ಹಸನ್ ಮಾಡೂರು, ಉದಯ್ ಕುಮಾರ್ ಶೆಟ್ಟಿ ಸೊಳ್ಳೇಂಜೂರು, ಪುಷ್ಠಿ ಮೊಹಮ್ಮದ್, ಸುಕುಮಾರ್ ಗಟ್ಟಿ, ಸಫ್ರೀನಾ, ಪ್ರಭಾವತಿ ಶೆಟ್ಟಿ, ಅಹ್ಮದ್ ಅಜ್ಜಿನಡ್ಕ, ಮೈಮೂನಾ, ಪ್ರಹ್ಲಾದ್, ರವಿ, ಹನೀಫ್ ಮೊದಲಾದವರು ಉಪಸ್ಥಿತರಿದ್ದರು.