ದ.ಕ. ಜಿಲ್ಲೆಯ ಕರಡು ಮತದಾರರ ಪಟ್ಟಿ ಪ್ರಕಟ: 51,815 ಹೊಸ ಮತದಾರರ ಸೇರ್ಪಡೆ
ಮಂಗಳೂರು: ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025 ವೇಳಾಪಟ್ಟಿ ಹೊರಡಿಸಿದ್ದು, ಅ.29ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ.
ಅ.29ರಿಂದ ನ. 28ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. ನ.9, 10 ಹಾಗೂ 23, 24ರಂದು ವಿಶೇಷ ನೋಂದಣಿ ಅಭಿಯಾನ ಆಯಾ ಮತಗಟ್ಟೆಗಳಲ್ಲಿ ನಡೆಯಲಿದೆ. ಡಿ.24ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಜನವರಿ 6ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.
ಕ್ಷೇತ್ರವಾರು ಕರಡು ಮತದಾರರ ಪಟ್ಟಿಯಂತೆ ಬೆಳ್ತಂಗಡಿ-2,32,269, ಮೂಡುಬಿದಿರೆ-2,10,211, ಮಂಗಳೂರು ನಗರ ಉತ್ತರ- 2,56,112, ಮಂಗಳೂರು ನಗರ ದಕ್ಷಿಣ- 2,53,407, ಮಂಗಳೂರು-2,09,955, ಬಂಟ್ವಾಳ-2,29,236, ಪುತ್ತೂರು-2,16,821, ಸುಳ್ಯ- 209261 ಮತದಾರರಿದ್ದಾರೆ.
ದ.ಕ.ಜಿಲ್ಲೆಯ ಕರಡು ಮತದಾರರ ಪಟ್ಟಿಯಲ್ಲಿ 51,815 ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. 22,948 ಮಂದಿಯ ಹೆಸರನ್ನು ಅಳಿಸಿ ಹಾಕಲಾಗಿದೆ. 28,827 ಹೆಸರು ತಿದ್ದುಪಡಿ ಮಾಡಲಾಗಿದೆ. 18ರಿಂದ 19ರ ಹರೆಯದ 19,905 ಯುವ ಮತದಾರರು ಸೇರ್ಪಡೆಯಾಗಿದ್ದಾರೆ. 85 ವಷರ್ ಮೇಲ್ಪಟ್ಟ 23,894 ಮತದಾರರಿದ್ದಾರೆ. 14,268 ವಿಕಲಚೇತನ ಮತದಾರರಿದ್ದಾರೆ. 258 ಆನಿವಾಸಿ ಭಾರತೀಯ ಮತ್ತು 514 ಸೇವಾ ಮತದಾರರಿದ್ದಾರೆ.
ಜನವರಿ 1, ಎಪ್ರಿಲ್ 1, ಜುಲೈ 1, ಅಕ್ಟೋಬರ್ 1ರಂದು 18 ವರ್ಷ ತುಂಬಿರುವ ಮತದಾರರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ನವೆಂಬರ್ 9,10,23,24ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿಶೇಷ ನೋಂದಣಿ ಕಾರ್ಯಕ್ರಮ ನಡೆಯಲಿದೆ. ಅರ್ಹ ಮತದಾರರು ಪಟ್ಟಿಗೆ ಹೆಸರು ಸೇರಿಸಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಮೊಬೈಲ್ ಆ್ಯಪ್ voter helpline app(VHA) ಮೂಲಕ ಅಥವಾ ವೆಬ್‌ಸೈಟ್ https://voters.eci.gov.in
ನಮೂನೆ 6ರಲ್ಲಿ 18 ವರ್ಷ ಪೂರೈಸಿದ ಹೊಸ ಮತದಾರರು ಮತದಾರರ ಪಟ್ಟಿಗೆ ಮತ್ತು ನಮೂನೆ 6 ಅರಲ್ಲಿ ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಹಾಗೂ ನಮೂನೆ 7 ರಲ್ಲಿ ಮತದಾರರ ಪಟ್ಟಿುಂದ ಹೆಸರು ತೆಗೆದು ಹಾಕಲು, ನಮೂನೆ ೮ರಲ್ಲಿ ವಿಳಾಸ ಸ್ಥಳಾಂತರ, ಮತದಾರರ ಪಟ್ಟಿಯಲ್ಲಿ ಹೆಸರು, ತಂದೆಯ ಹೆಸರು, ವಿಳಾಸ, ವಯಸ್ಸು, ಲಿಂಗ ಇತ್ಯಾದಿ ತಿದ್ದುಪಡಿ ಮಾಡಲು, ಎಪಿಕ್‌ಕಾರ್ಡ್ ಬದಲಾಯಿಸಲು ಅವಕಾಶವಿದೆ. ನಮೂನೆ 6 ರಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಬಹುದಾಗಿದೆ.
ಸಾರ್ವಜನಿಕರು ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಲ್ಲಿ ಅಥವಾ ಮತದಾರ ನೋಂದಣಾಧಿಕಾರಿ ಕಚೇರಿ (ಎಸಿ ಕಚೇರಿ, ತಹಶೀಲ್ದಾರ್ ಕಚೇರಿ)ಯನ್ನು ಭೇಟಿ ನೀಡಿ ಮತದಾರರ ಹೆಸರು ನೋಂದಾಯಿಸುವ ಬಗ್ಗೆ ಅಥವಾ ಲೋಪದೋಷಗಳ ಬಗ್ಗೆ ವೆಬ್ ಪೋರ್ಟಲ್ www.ecokarnataka.kar.nic.in, https://voters.eci.gov.in