ಮಕ್ಕಳ ಮಾನಸಿಕ ಖಿನ್ನತೆಗೆ ಅತಿಯಾದ ಮೊಬೈಲ್ ಬಳಕೆ ಕಾರಣ: ಡಾ. ದೇವದಾಸ್‌ರೈ

Update: 2024-02-19 09:55 GMT

ಮಂಗಳೂರು, ಫೆ.19 :ಇಂದಿನ ಶಾಲಾ ಮಕ್ಕಳ ಮಾನಸಿಕ ಖಿನ್ನತೆಗೆ ಅತೀಯಾದ ಮೊಬೈಲ್ ಬಳಕೆ ಮತ್ತು ಮಾದಕದ್ರವ್ಯ ಸೇವನೆಯೇ ಮೂಲ ಕಾರಣ ಎಂದು ಖ್ಯಾತ ವೈದ್ಯ ಡಾ. ದೇವದಾಸ್ ರೈ ಅಭಿಪ್ರಾಯಪಟ್ಟರು .

ನಗರದ ಕೂಳೂರಿನ ಅಮೃತ ನರ್ಸರಿ ಶಾಲೆಯ ದಶಮಾನೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಪೋಷಕರನ್ನು ಮತ್ತು ಶಿಕ್ಷಕರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಶಿಕ್ಷಕರು ಮತ್ತು ಪೋಷಕರು ಮಕ್ಕಳನ್ನು ಈ ದುಶ್ಚಟದಿಂದ ಮುಕ್ತಗೊಳಿಸಲು ಪ್ರಾಮಾಣಿಕತೆಯಿಂದ ಶ್ರಮಿಸಬೇಕೆಂದು ಅವರು ಸಲಹೆ ನೀಡಿದರು.

ಮಂಗಳೂರು ನಗರ ಮಹಾನಗರ ಪಾಲಿಕೆಯ ಸದಸ್ಯ ಅನಿಲ್ ಕುಮಾರ್ ಗೌರವ ಅತಿಥಿಯಾಗಿ ಹಾಗೂ ಫಲ್ಗುಣಿ ಇಂಡಸ್ಟ್ರಿ ಮಾಲಕಿ ಸರಸ್ವತಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು.

ಅಮೃತ ಶಾಲಾ ಮುಖ್ಯ ಶಿಕ್ಷಕಿ ಸ್ವಪ್ನ ಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಲಾ ವಾರ್ಷಿಕ ವರದಿ ಮಂಡಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕಿಯರ ಸಾಧನೆಯನ್ನು ಪರಿಗಣಿಸಿ ಗೌರವಿಸಲಾಯಿತು. ಶಿಕ್ಷಕಿಯರಾದ ಅನಿತಾ ಶಾಂತಕುಮಾರ್, ಶಿಲ್ಜಾ ಶಶಿಕುಮಾರ್ ಅವರುಕಾರ್ಯಕ್ರಮ ನಿರೂಪಿಸಿದರು. ಗೀತಾಲಕ್ಷ್ಮೀ ವಂದಿಸಿದರು.ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಜರಗಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News