ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ಆಶ್ರಯದಲ್ಲಿ ರಕ್ತದಾನ ಶಿಬಿರ, ದಸರಾ ಕ್ರೀಡಾಕೂಟ

Update: 2024-10-14 08:43 GMT

ಕೊಣಾಜೆ: ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ಆಶ್ರಯದಲ್ಲಿ ಯೆನೆಪೋಯ ರಕ್ತ ಕೇಂದ್ರ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಮತ್ತು ದಸರಾ ಕ್ರೀಡಾಕೂಟ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ಅಧ್ಯಕ್ಷರಾದ KH ಇಕ್ಬಾಲ್ ವಹಿಸಿದ್ದರು. ಪಕ್ಕಲಡ್ಕ ಯುವಕ ಮಂಡಲ(ರಿ) ಇದರ ಅಧ್ಯಕ್ಷರಾದ ನಾಗರಾಜ್ ಬಜಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ರಕ್ತದಾನದ ಅಗತ್ಯತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ಉಳ್ಳಾಲ ತಾಲೂಕು ಅಧ್ಯಕ್ಷ ಅಡ್ವೊಕೇಟ್ ನಿತಿನ್ ಕುತ್ತಾರ್, ಬದ್ರಿಯಾ ಜುಮಾ ಮಸೀದಿ ಆಲಡ್ಕ ಇದರ ಅಧ್ಯಕ್ಷ ರಫೀಕ್ ಹರೇಕಳ, ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್ ಹರೇಕಳ, ಡಿವೈಎಫ್ಐ ಉಳ್ಳಾಲ ತಾಲೂಕು ಉಪಾಧ್ಯಕ್ಷ ರಝಾಕ್ ಮುಡಿಪು, ಮಾಜಿ ಅಧ್ಯಕ್ಷ ರಝಾಕ್ ಮೊಂಟೆಪದವು, ಹರೇಕಳ ಗ್ರಾಮ ಸಮಿತಿ ಕಾರ್ಯದರ್ಶಿ ಹೈದರ್ ಆಲಡ್ಕ, ಮುಖಂಡರಾದ ಬಶೀರ್ ಲಚ್ಚಿಲ್, ನಿಝಾಮ್ ಆಲಡ್ಕ, ಹನೀಫ್ ಪೋಡಾರ್ ಸೈಟ್,  ಹಿರಿಯ ಸಂಗಾತಿಗಳಾದ ಹಮೀದ್ ಮಲಾರ್, ಉಮರಬ್ಬ ನ್ಯೂಪಡ್ಪು, ಸತ್ತಾರ್ ಕೊಜಪಾಡಿ, ಎವ್ರಿಸ್ ಉಪಸ್ಥಿತರಿದ್ದರು.

37 ಜನರು  ರಕ್ತದಾನ ಮಾಡಿದರು. ಡಿವೈಎಫ್ಐ ಹರೇಕಳದ 4 ಕಿರಿಯ ಸಂಗಾತಿಗಳು ಪ್ರಥಮವಾಗಿ ರಕ್ತದಾನ ಮಾಡಿದರು. ದಸರಾ ಕ್ರೀಡಾಕೂಟದ ಭಾಗವಾಗಿ ಮಕ್ಕಳು ಮತ್ತು ಯುವಕರಿಗೆ ವಿವಿಧ ರೀತಿಯ ಮನರಂಜನೆಯ ಕ್ರೀಡೆ ನಡೆಸಲಾಯಿತು. ರಿಝ್ವಾನ್ ಹರೇಕಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




 



 



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News