ಎಸ್ಎಸ್ಎಲ್‌ಸಿ ಫಲಿತಾoಶ ಕರಾವಳಿ ಅಗ್ರಸ್ಥಾನಕ್ಕೆ ಶತಪ್ರಯತ್ನ: ಶಿಕ್ಷಣ ಇಲಾಖೆ ಕಾರ್ಯ ಯೋಜನೆಗೆ ಮೀಫ್ ಸಹಕಾರ
ಮಂಗಳೂರು : ಮುಂದಿನ ವರ್ಷ ಎಸ್ಎಸ್ಎಲ್ ಸಿ ಫಲಿತಾoಶದಲ್ಲಿ ನಮ್ಮ ಜಿಲ್ಲೆ ಅಗ್ರ ಸ್ಥಾನ ಪಡೆಯಲು ಶಿಕ್ಷಣ ಇಲಾಖೆಯ ಕಾರ್ಯ ಯೋಜನೆಗಳೊಂದಿಗೆ ಕೈ ಜೋಡಿಸಿ ಮೀಫ್ ಸದಸ್ಯ ಶಾಲೆಗಳಲ್ಲಿ ಉತ್ತಮ ಫಲಿoತಾಶ ದಾಖಲಿಸಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ, ಪ್ರಧಾನ ಕಾರ್ಯದರ್ಶಿ ರಿಯಾಝ್ ತಿಳಿಸಿದ್ದಾರೆ.
ಕಲಿಕೆಯಲ್ಲಿ ಹಿಂದೆ ಉಳಿಯುವ ವಿದ್ಯಾರ್ಥಿಗಳಿಗೆ ವೀಕೇಂಡ್ ಕ್ಲಾಸ್ ಗಳ ಮೂಲಕ ಸ್ಪೆಷಲ್ ಕೋಚಿಂಗ್ ನೀಡಲಾಗುವುದು. ಇದಕ್ಕಾಗಿ ಪ್ರತ್ಯೇಕ ಸೆಂಟರ್ ಗಳನ್ನು ತೆರೆಯಲಾಗುವುದು, ಗಣಿತ, ವಿಜ್ಞಾನ, ಇಂಗ್ಲೀಷ್ ವಿಷಯಗಳ ಹೈಸ್ಕೂಲ್ ಅಧ್ಯಾಪಕರುಗಳಿಗೆ ನುರಿತ ವಿಷಯ ತಜ್ಞರಿಂದ ಕಾರ್ಯಗಾರ ಏರ್ಪಡಿಸಲಾಗುವುದು, ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ತರಬೇತುದಾರರಿಂದ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುವುದು, ಆಡಳಿತ ಮಂಡಳಿಯೊಂದಿಗೆ ನಿರಂತರ ಸಂಪರ್ಕವಿರಿಸಿ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.