ಪುಂಜಾಲಕಟ್ಟೆ: ಸಂಭ್ರಮದ ಈದುಲ್ ಫಿತ್ರ್ ಆಚರಣೆ

Update: 2025-03-31 18:41 IST
ಪುಂಜಾಲಕಟ್ಟೆ: ಸಂಭ್ರಮದ ಈದುಲ್ ಫಿತ್ರ್ ಆಚರಣೆ
  • whatsapp icon

ಪುಂಜಾಲಕಟ್ಟೆ: ಬದ್ರಿಯಾ ಜುಮಾ ಮಸೀದಿ ಪುಂಜಾಲಕಟ್ಟೆಯಲ್ಲಿ ಈದುಲ್ ಫಿತ್ರ್ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಬೆಳಿಗ್ಗೆ 8 ಗಂಟೆಗೆ ನಡೆದ ಸಾಮೂಹಿಕ ಈದ್ ನಮಾಝ್ ಖತೀಬ್ ಇಸ್ಮಾಯಿಲ್ ಫೈಝಿ ನೇತೃತ್ವದಲ್ಲಿ ನಡೆಯಿತು.

ಈದುಲ್ ಫಿತ್ರ್ ಆಚರಣೆಯು ವಿಶ್ವಾಸಿಗಳ ಪಾಲಿಗೆ ಬಹು ಪ್ರಮುಖ ಆಚರಣೆಯಾಗಿದೆ. ಈ ದಿನ ಮುಸ್ಲಿಮರು ಕುಟುಂಬ ಸಂಬಂಧವನ್ನು ಬಲಪಡಿಸುವ ಕಾರ್ಯ ಮಾಡಬೇಕು ಎಂದು  ಇಸ್ಮಾಯಿಲ್ ಫೈಝಿ ಈದ್‌ ಸಂದೇಶದಲ್ಲಿ ಹೇಳಿದರು.

ಮಾತ್ರವಲ್ಲ ಜಗತ್ತಿನಲ್ಲಿ ಶಾಶ್ವತವಾಗಿ ಶಾಂತಿ ಸ್ಥಾಪನೆಯಾಗಲಿ ಎಂದು ಶುಭ ಹಾರೈಸಿದರು.

ಈದ್ ನಮಾಝ್ ನಂತರ ಖಬರ್ ಝಿಯಾರತ್ ಮಾಡಿ ದುವಾ ಮಾಡಲಾಯಿತು.




 


Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News