SUCC ಕರ್ನಾಟಕ ಪ್ರಧಾನ ಕಾರ್ಯದರ್ಶಿಗೆ ಸನ್ಮಾನ
Update: 2025-04-25 14:08 IST

ಮಂಗಳೂರು: ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಕರ್ನಾಟಕ ಇದರ ವತಿಯಿಂದ ಜಾಮಿಯಾ ನಿಝಾಮಿಯಾ ಅಲ್ ಫಾರೂಖಿಯಾ ವಿದ್ಯಾಲಯದಿಂದ ನಿಝಾಮಿ ಅಲ್ ಫಾರೂಖಿ ಬಿರುದು ಪಡೆದ SUCC ಪಧಾನ ಕಾರ್ಯದರ್ಶಿ ಅಲ್ ಹಾಜ್ ಮುಹಮ್ಮದ್ ಹನೀಫ್ ನಿಝಾಮಿ ಅಲ್ ಫಾರೂಖಿ ಯವರನ್ನು ಸನ್ಮಾನಿಸಲಾಯಿತು.
SUCC ಕರ್ನಾಟಕ ಅಧ್ಯಕ್ಷರಾದ ಅಲ್ ಹಾಜ್ ಬಾವ ಮದನಿ ಬಾಂಬಿಲ, ಉಪಾಧ್ಯಕ್ಷರುಗಳಾದ ಅಲ್ ಹಾಜ್ ಮಾಹಿನ್ ದಾರಿಮಿ ಪಾತೂರ್, ಕೆ. ಬಿ. ಅಬ್ದುಲ್ ಖಾದರ್ ದಾರಿಮಿ ಕೊಡುಂಗೈ, ಕೋಶಾಧಿಕಾರಿ ಅಬೂಸಿರಾಜ್ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಕಾರ್ಯದರ್ಶಿ ಹನೀಫ್ ದಾರಿಮಿ ಸವಣೂರ್, ಇಕ್ಬಾಲ್ ಹನೀಫಿ ನಂದರಬೆಟ್ಟು, ಅಬೂಬಕರ್ ಮುಸ್ಲಿಯಾರ್ ಬೊಳಂತೂರ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಪರ್ಲಿಯಾ, ಮುಹಮ್ಮದ್ ಮುಸ್ಲಿಯಾರ್ ನಾಡಾಜೆ, ಬಶೀರ್ ವಗ್ಗ ಮೊದಲಾದವರು ಉಪಸ್ಥಿತರಿದ್ದರು.