ಶಿವಬಾಗ್‌ನಲ್ಲಿ ವಸತಿ ಸಮುಚ್ಚಯ ಪೂರ್ವಜ್‌ಗೆ ಶಿಲಾನ್ಯಾಸ

Update: 2025-04-30 14:25 IST
ಶಿವಬಾಗ್‌ನಲ್ಲಿ ವಸತಿ ಸಮುಚ್ಚಯ ಪೂರ್ವಜ್‌ಗೆ ಶಿಲಾನ್ಯಾಸ
  • whatsapp icon

ಮಂಗಳೂರು,ಎ.30: ನಗರದ ಶಿವಭಾಗ್‌ನಲ್ಲಿ ನಿಧಿಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ ಸಂಸ್ಥೆ ನಿರ್ಮಿಸಲಿರುವ ಐಶಾರಾಮಿ ವಸತಿ ಸಮುಚ್ಚಯ ಪೂರ್ವಜ್‌ಗೆ ಬುಧವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಶಿಲಾನ್ಯಾಸ ಸಮಾರಂಭದಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್, ಮಾಜಿ ಸಚಿವ ಬಿ. ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಆರ್ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.

ನಿಧಿಲ್ಯಾಂಡ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾದ ಪ್ರಶಾಂತ್ ಕೆ. ಸನಿಲ್ ಸ್ವಾಗತಿಸಿದರು.

ಪೂರ್ವಜ್‌ ಮಂಗಳೂರಿನ ಶಿವಬಾಗ್‌ನಲ್ಲಿ ನಿರ್ಮಾಣಗೊಳ್ಳಲಿದ್ದು, ತಳ ಮತ್ತು ಕೆಳಗಿನ ನೆಲ ಅಂತಸ್ತಿನಲ್ಲಿ ಕಾರ್ ಪಾರ್ಕ್ ಸೌಲಭ್ಯ ಹಾಗೂ ಮೇಲಿನ ನೆಲ ಅಂತಸ್ತಿನಲ್ಲಿ ಕ್ಲಬ್ ಹೌಸ್ ಅಲ್ಲದೆ ಉಳಿದ 12 ಮಹಡಿಗಳಲ್ಲಿ ವಿಶಿಷ್ಟ 4 ಬಿಎಚ್‌ಕೆ ಮನೆಗಳನ್ನು ಹೊಂದಿದೆ. ಪ್ರತಿಯೊಂದು ಮಹಡಿಗೂ ಒಂದೊಂದು ಅಪಾರ್ಟ್‌ಮೆಂಟ್ ಮಾತ್ರವಿದ್ದು ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಲು ಸಾಧ್ಯವಾಗುವ ವಿಶಾಲ ಕೋಣೆಗಳು ಪೂರ್ವಜ್ ವಸತಿ ಸಮುಚ್ಚಯದಲ್ಲಿವೆ.

ಪೂರ್ವಜ್‌ನಲ್ಲೂ ರೂಫ್‌ಟಾಪ್ ಓಝೋನೈಸ್ಡ್ ಸ್ವಿಮ್ಮಿಂಗ್ ಪೂಲ್, ಸುಸಜ್ಜಿತ ಜಿಮ್ನಾಸಿಯಮ್, ಬಿಲಿಯರ್ಡ್ಸ್ ಟೇಬಲ್, ಚೆಸ್/ ಕ್ಯಾರಮ್, ಇತರ ಬೋರ್ಡ್ ಆಟಗಳ ಕೊಠಡಿ, ಸೌನಾ, ಸ್ಟೀಮ್ ರೂಂ, ಜಕುಝಿ, ಸಮ್ಮೇಳನ ಸಭಾಂಗಣ ಮುಂತಾದ ಆಧುನಿಕ ಸೌಲಭ್ಯಗಳು ಸಿದ್ಧಗೊಳ್ಳಲಿವೆ.

ನಿಧಿಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿಧಿಲ್ಯಾಂಡ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾದ ಪ್ರಶಾಂತ್ ಕೆ. ಸನಿಲ್ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 32 ವರ್ಷಗಳ ಅನುಭವ ಹೊಂದಿದ್ದಾರೆ. ಸಂಸ್ಥೆಯು ಆರಂಭವಾಗಿ 12 ವರ್ಷಗಳಾಗಿದ್ದು 11 ಯೋಜನೆಗಳನ್ನು ಈಗಾಗಲೇ ಪೂರ್ಣಗೊಳಿಸಿದೆ. ಶಕ್ತಿ ಹೈಟ್ಸ್ ಮತ್ತು ಸ್ಮೃತಿ ಹೈಟ್ಸ್ ನಿರ್ಮಾಣದ ಹಂತದಲ್ಲಿದೆ. ವೈಟ್‌ ರೋಸ್, ಬಿಸಿನೆಸ್ ಬೇ, ಬಿಸಿನೆಸ್ ಪಾರ್ಕ್, ಕ್ಯಾಸಲ್‌ ಗ್ರೀನ್ ಸಂಸ್ಥೆಯ ಮುಂದಿನ ಪ್ರಮುಖ ಯೋಜನೆಗಳಾಗಿವೆ ಎಂದು ನಿಧಿಲ್ಯಾಂಡ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪ್ರಶಾಂತ್ ಕೆ. ಸನಿಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News