ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ IEEE ಜಾಗೃತಿ ಕಾರ್ಯಕ್ರಮ

Update: 2025-04-17 23:01 IST
ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ IEEE ಜಾಗೃತಿ ಕಾರ್ಯಕ್ರಮ
  • whatsapp icon

ಮಂಗಳೂರು: ಐಇಇಇ ಸದಸ್ಯತ್ವ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿನ ಐಇಇಇ ಸಂಘಟನೆಗಳ ಪ್ರಯೋಜನದ ಕುರಿತು ವಿದ್ಯಾರ್ಥಿಗಳು ಹಾಗೂ ಬೋಧನಾ ಸಿಬ್ಬಂದಿಗಳಲ್ಲಿ ಜಾಗೃತಿ ಮೂಡಿಸಲು ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಯಲ್ಲಿ ಐಇಇಇ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಐಇಇಇ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಐಇಇಇ ಮಂಗಳೂರು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಐಇಇಇ ಮಂಗಳೂರಿನ ಅಧ್ಯಕ್ಷ ಡಾ. ಸತ್ಯನಾರಾಯಣ, ಐಇಇಇ ಸದಸ್ಯತ್ವದ ವಿವಿಧ ಪ್ರಯೋಜನಗಳ ಕುರಿತು ವಿವರಿಸಿದರು. ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಗಳು, ಉದ್ಯಮಗಳು ಹಾಗೂ ಶೈಕ್ಷಣಿಕ ತಜ್ಞರೊಂದಿಗೆ ಜಾಗತಿಕ ಸಂಶೋಧನೆ, ವೃತ್ತಿಪರ ಅಭಿವೃದ್ಧಿ ಸಂಪನ್ಮೂಲಗಳು ಹಾಗೂ ನೆಟ್ ವರ್ಕಿಂಗ್ ಅವಕಾಶಗಳ ಮೂಲಕ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.

ಕಾಲೇಜುಗಳಲ್ಲಿ ಐಇಇಇ ಸಂಘಟನೆಗಳನ್ನು ರಚಿಸಬೇಕಾದ ಪ್ರಾಮುಖ್ಯತೆ ಕುರಿತು ಐಇಇಇ ಬೆಂಗಳೂರು ವಿಭಾಗದ ಉಪಾಧ್ಯಕ್ಷ ಡಾ. ಪರಮೇಶಾಚಾರಿ ಬೆಳಕು ಚೆಲ್ಲಿದರು. ಇಂತಹ ಸಂಘಟನೆಗಳು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಲ್ಲಿ ಆವಿಷ್ಕಾರ, ನಾಯಕತ್ವ ಹಾಗೂ ಸಹಯೋಗವನ್ನು ಪ್ರೋತ್ಸಾಹಿ ಸುತ್ತವೆ ಎಂದು ಅವರು ಪ್ರತಿಪಾದಿಸಿದರು.

ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಸ್ವಾಗತಿಸಿದರು. ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಐಇಇಇ ಶಾಖೆಯ ಅಧ್ಯಕ್ಷೆ ಸೈಮಾ ನಿರ್ವಹಿಸಿದರು.






 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News