ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ʼಡೇಟಾ ರಕ್ಷಣೆ, ಸೈಬರ್ ಭದ್ರತೆʼ ಕುರಿತು ಉಪನ್ಯಾಸ ಕಾರ್ಯಕ್ರಮ
ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (CSE) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ (ECE) ವಿಭಾಗ, IEEE BIT ವಿದ್ಯಾರ್ಥಿ ಶಾಖೆ ಮತ್ತು ಬಿಐಟಿ ಇನ್ನೋವೇಶನ್ ಕೌನ್ಸಿಲ್ ಸಹಯೋಗದೊಂದಿಗೆ “ಜಾಗತಿಕ ಡೇಟಾ ಸಂರಕ್ಷಣಾ ನೀತಿ ಮತ್ತು ನಿಯಂತ್ರಣ” ಮತ್ತು “ಸೈಬರ್ ಸೆಕ್ಯುರಿಟಿ ಆರ್ಕಿಟೆಕ್ಚರ್” (Global Data Protection Policy & Regulation” and “Cyber Security Architecture) ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ನಡೆಯಿತು.
ಬಿಐಟಿಯ ಅಂತಾರಾಷ್ಟ್ರೀಯ ಸೆಮಿನಾರ್ ಹಾಲ್ ನಲ್ಲಿ ಕಾರ್ಯಕ್ರಮ ನಡೆದಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿದೆ. ವಿಶೇಷ ಅತಿಥಿಗಳಾಗಿ ಲಂಡನ್ ನ ಕಾರ್ಡಿಫ್ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದ ಡಾ. ವಿಭಿಷಿಣಿ ಬೆಂಟೋತಹೇವಾ ಮತ್ತು ಡಾ. ಲಿಕಾ ನವಾಫ್ ಉಪನ್ಯಾಸವನ್ನು ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಬಿಐಟಿಯ ಪ್ರಾಂಶುಪಾಲರಾದ ಡಾ.ಮಂಝೂರ್ ಬಾಷಾ ಅವರು ಡೇಟಾ ರಕ್ಷಣೆ ಮತ್ತು ಸೈಬರ್ ಭದ್ರತೆಗೆ ಸಂಬಂಧಿಸಿ ಹೊಸ ಹೊಸ ವಿಚಾರವನ್ನು ತಿಳಿದುಕೊಳ್ಳುವುದರ ಕುರಿತು ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದು, ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಎಲೆಕ್ಟ್ರಾನಿಕ್ಸ್ ವಿಭಾಗದ ಡಾ.ಎ.ಎಂ. ಖಾನ್ ಕೂಡ ಕಾರ್ಯಕ್ರಮದಲ್ಲಿ ಪ್ರೋತ್ಸಾಹಕ ಮಾತುಗಳನ್ನಾಡಿದ್ದಾರೆ. ಸಿಎಸ್ ಇ ವಿಭಾಗದ ಮುಖ್ಯಸ್ಥರಾದ ಪ್ರೊ.ಸಿನಾನ್ ಅವರು ಧನ್ಯವಾದ ಸಲ್ಲಿಸಿದ್ದು, ವಿವಿಧ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.