ಕೆಸಿಎಫ್ ದಶಮಾನೋತ್ಸವ: ಡಿಸೇನಿಯಂ ಸ್ವಾಗತ ಸಮಿತಿ ಅಸ್ತಿತ್ವಕ್ಕೆ

Update: 2024-02-29 06:02 GMT

ಮಂಗಳೂರು: ಅನಿವಾಸಿ ಮುಸ್ಲಿಂ ಕನ್ನಡಿಗರ ಸಾಮಾಜಿಕ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಇದರ ದಶಮಾನೋತ್ಸವದ ಪ್ರಯುಕ್ತ ಸ್ವಾಗತ ಸಮಿತಿ ರಚನಾ ಸಭೆಯು ನಗರದ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ದುಆ ನೆರವೇರಿಸಿದರು. ಕರ್ನಾಟಕ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಮುಹಮ್ಮದ್ ಸಅದಿ ವಳವೂರು ಅಧ್ಯಕ್ಷತೆ ವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಡಿ.ಪಿ ಯೂಸುಫ್ ಸಖಾಫಿ ಬೈತಾರ್, 'ಕೆಸಿಎಫ್ ಕಳೆದ ಹತ್ತು ವರ್ಷಗಳಿಂದ ದೇಶ ವಿದೇಶಗಳಲ್ಲಿ ವಿವಿಧ ರೀತಿಯ ಸಾಮಾಜಿಕ ಶೈಕ್ಷಣಿಕ ಸಾಂತ್ವನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ಇದೀಗ ದಶಮಾನೋತ್ಸವದ ಪ್ರಯುಕ್ತ ಅರ್ಹ ಬಡ ಕುಟುಂಬಗಳ ಹತ್ತು ಜೋಡಿಗಳ ಉಚಿತ ಸಾಮೂಹಿಕ ವಿವಾಹ ಹಾಗೂ ಡಿಸೇನಿಯಮ್ ಅಂತರಾಷ್ಟ್ರೀಯ ಸಮ್ಮೇಳನ 2024 ಮೇ19 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ನಡೆಯಲಿದೆ' ಎಂದು ತಿಳಿಸಿದರು.

ಹತ್ತು ಬಡ ಕುಟುಂಬಗಳಿಗೆ ದಾರುಲ್ ಅಮಾನ್ ವಸತಿ ನಿರ್ಮಾಣ, ಹತ್ತು ಕೊಳವೆ ಬಾವಿ ಯೋಜನೆ, ಸ್ಟೂಡೆಂಟ್ಸ್ ಕಾನ್ಫರೆನ್, ವಿಐಪಿ ಕಾನ್ಫರೆನ್ಸ್, ಫಾಮಿಲಿ ಮುಲಾಖಾತ್ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಕೂಡ ಈ ಸಂದರ್ಭ ನಡೆಯಲಿವೆ ಎಂದರು.

ಈ ಕಾರ್ಯಕ್ರಮಗಳ ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಮಟ್ಟದ ಸ್ವಾಗತ ಸಮಿತಿ ರಚಿಸಲಾಯಿತು.

ಸ್ವಾಗತ ಸಮಿತಿ ನಿರ್ದೇಶಕಾರಾಗಿ ದ.ಕ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಅಲ್ ಬುಖಾರಿ ಕೂರತ್ ತಂಙಳ್, ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್, ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕಾರ್ಯದರ್ಶಿ ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡು, ಉಪಾಧ್ಯಕ್ಷ ಮುಹಮ್ಮದ್ ಸಅದಿ ವಳವೂರು, ಕೆಎಂಜೆ ರಾಜ್ಯಾಧ್ಯಕ್ಷ ಡಾ. ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್, ಎಸ್ ಎಂಎ ರಾಜ್ಯಾಧ್ಯಕ್ಷ ಸಯ್ಯಿದ್ ಇಸ್ಮಾಈಲ್ ತಂಙಳ್ ಉಜಿರೆ, ಯೆನೆಪೋಯ ಮುಹಮ್ಮದ್ ಕುಂಞಿ, ಡಾ. ಶೇಖ್ ಬಾವ ಹಾಜಿ, ಮುಹಮ್ಮದ್ ಹಾಜಿ ಸಾಗರ್, ಎಸ್ ಎಂಆರ್ ರಶೀದ್ ಹಾಜಿ ಅವರನ್ನು ನೇಮಿಸಲಾಯಿತು.

ಡಿಸೇನಿಯಂ ಕಾನ್ಫರೆನ್ಸ್ ನಿರ್ದೇಶಕರಾಗಿ ಡಿ.ಪಿ ಯೂಸುಫ್ ಸಖಾಫಿ ಬೈತಾರ್, ಪಿ.ಎಂ ಹಮೀದ್ ಈಶ್ವರಮಂಗಳ, ಅಲಿ ಮುಸ್ಲಿಯಾರ್ ಬಹರೈನ್ ರವರನ್ನು ಆರಿಸಲಾಯಿತು.

ಡಿಸೇನಿಯಂ ಸ್ವಾಗತ ಸಮಿತಿ ಚೇರ್ಮೆನ್ ಆಗಿ ರೈಸ್ಕೊ ಅಬೂಬಕ್ಕರ್ ಹಾಜಿ ಅವರು ಆಯ್ಕೆಯಾದರು. ವರ್ಕಿಂಗ್ ಚೇರ್ಮೆನ್ ಆಗಿ ಶಾಕಿರ್ ಹಾಜಿ ಹೈಸಂ, ವೈಸ್ ಚೇರ್ಮೆನ್ ಗಳಾಗಿ ತೋಕೆ ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ಅಬೂಸುಫ್ಯಾನ್ H.I ಇಬ್ರಾಹೀಂ ಮದನಿ, ಶಾಫಿ ಸಅದಿ ಬೆಂಗಳೂರು, ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಹಫೀಳ್ ಸಅದಿ ಕೊಳಕ್ಕೇರಿ ಆಯ್ಕೆಯಾದರು.

ಸಮಿತಿಯ ಜನರಲ್ ಕನ್ವೀನರಾಗಿ ಮುಮ್ತಾಝ್ ಅಲಿ ಕೃಷ್ಣಾಪುರ ಅವರನ್ನು ಆಯ್ಕೆ ಮಾಡಲಾಯಿತು. ವರ್ಕಿಂಗ್ ಕನ್ವೀನರಾಗಿ ಸಲೀಂ ಕನ್ಯಾಡಿ ಅವರನ್ನು ಆರಿಸಲಾಯಿತು. ಸಮಿತಿಯ ಫಿನಾನ್ಸ್ ಕನ್ವೀನರಾಗಿ ಇಕ್ಬಾಲ್ ಬರಕ ರವರನ್ನು ನೇಮಿಸಲಾಯಿತು.

ಕನ್ವೀನರುಗಳಾಗಿ ಪಿ.ಪಿ ಅಹ್ಮದ್ ಕಾಮಿಲ್ ಸಖಾಪಿ ಕಾಶಿಪಟ್ನ, ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ, ಇಸ್ಮಾಈಲ್ ಸಖಾಫಿ ಕೊಂಡಂಗೇರಿ, ಕೆ.ಕೆ.ಎಂ ಕಾಮಿಲ್ ಸಖಾಫಿ, ಅಶ್ರಫ್ ಕಿನಾರ ಅವರನ್ನು ಆರಿಸಲಾಯಿತು.

ಪ್ರೋಗ್ರಾಮ್ ಕಮಿಟಿ ಕನ್ವೀನರುಗಳಾಗಿ ಎಸ್.ಪಿ ಹಂಝ ಸಖಾಫಿ ಬಂಟ್ವಾಳ, ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್, ಕೆ.ಎಂ ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ ಅವರನ್ನು ಆಯ್ಕೆ ಮಾಡಲಾಯಿತು.

ಮೀಡಿಯಾ ವಿಭಾಗದ ಚೀಫ್ ಕೋರ್ಡಿನೇಟರಾಗಿ ಹಸೈನಾರ್ ಆನೆಮಹಲ್ ಮತ್ತು ಮೀಡಿಯಾ ಕೋರ್ಡಿನೇಟರಾಗಿ ಶಾಕಿರ್ ಎಂಎಸ್ಸಿ ಬಜ್ಪೆ, ಸಫ್ವಾನ್ ಚಿಕ್ಕಮಗಳೂರು ಅವರನ್ನು ಆಯ್ಕೆ ಮಾಡಲಾಯಿತು.

ಪಬ್ಲಿಸಿಟಿ ವಿಭಾಗದ ಚೀಫ್ ಕೋರ್ಡಿನೇಟರ್ ಆಗಿ ಎಂ.ಪಿ.ಎಂ ಅಶ್ರಫ್ ಸಅದಿ ಮಲ್ಲೂರು, ಕೋರ್ಡಿನೇಟರುಗಳಾಗಿ ನವಾಝ್ ಸಖಾಫಿ ಅಡ್ಯಾರ್, ಎಂಬಿಎಂ ಸಾದಿಖ್ ಮಲೆಬೆಟ್ಟು, ಮಹಬೂಬ್ ಸಖಾಫಿ, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಇಬ್ರಾಹಿಂ ಮಾಲಿಕಿ ಬೋಳಂತೂರು, ಕೆ.ಎಂ ಮುಸ್ತಫ ನಈಮಿ ಹಾವೇರಿ, ಇಸ್ಮಾಈಲ್ ಸಅದಿ ಕಿನ್ಯ ರವರನ್ನು ಆರಿಸಲಾಯಿತು.

ಅತಿಥಿ ವಿಭಾಗದ ಚೀಫ್ ಕೋರ್ಡಿನೇಟರಾಗಿ ಹಾಫಿಳ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ, ಕೋರ್ಡಿನೇಟರುಗಳಾಗಿ ರಹೀಂ ಸಅದಿ ಖತರ್, ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯ್ಯ, ಇಸ್ಹಾಖ್ ಝುಹ್ರಿ ಸೂರಿಂಜೆ, ಅಝೀಝ್ ಮಿಸ್ಬಾಹಿ ಪುತ್ತೂರು, ಇರ್ಷಾದ್ ಹಾಜಿ ಗೂಡಿನಬಳಿ, ಮನ್ಸೂರ್ ಅಲಿ ಶಿವಮೊಗ್ಗ ಅವರನ್ನು ಆಯ್ಕೆ ಮಾಡಲಾಯಿತು.

ಈವೆಂಟ್ ವಿಭಾಗದ ಚೀಫ್ ಕೋರ್ಡಿನೇಟರ್ ಆಗಿ ಹಮೀದ್ ಬಜ್ಪೆ ಮತ್ತು ಕೋರ್ಡಿನೇಟರಾಗಿ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್ ರವರನ್ನು ಆಯ್ಕೆ ಮಾಡಲಾಯಿತು.

ಕಾನೂನು ಸಲಹೆಗಾರರಾಗಿ ಅಡ್ವಕೇಟ್ ಹಂಝತ್ ಉಡುಪಿ, ಸ್ವಯಂ ಸೇವಕ ವಿಭಾಗದ ಚೀಫ್ ಕೋರ್ಡಿನೇಟರಾಗಿ ಹಾಫಿಳ್ ಯಾಕೂಬ್ ಸಅದಿ ಮತ್ತು ಕೋರ್ಡಿನೇಟರುಗಳಾಗಿ ಇಸ್ಹಾಖ್ ತಂಙಳ್ ಅಡ್ಯಾರ್, ಇಕ್ಬಾಲ್ ಬಪ್ಪಳಿಗೆ, ಅಲಿ ತುರ್ಕಳಿಕೆ, ಸ್ವಾಲಿಹ್ ಮುರ ಮುಂತಾದವರನ್ನು ಅಯ್ಕೆ ಮಾಡಲಾಯಿತು.

ಇಕ್ಬಾಲ್ ಬರಕ ಸ್ವಾಗತಿಸಿ ಸಲೀಂ ಕನ್ಯಾಡಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News