ಕೃಷ್ಣನ ತತ್ವ ಆದರ್ಶಗಳು ಸಮಾಜಕ್ಕೆ ದಾರಿದೀಪ: ಸ್ಪೀಕರ್ ಯು.ಟಿ.ಖಾದರ್

Update: 2024-08-28 15:49 GMT

ಕೊಣಾಜೆ: ಕೃಷ್ಣನ ತತ್ವ ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಿದೆ. ಇಂತಹ ಹಬ್ಬಗಳನ್ನು ಸಮಾಜದ ಎಲ್ಲರೂ ಜೊತೆ ಗೂಡಿ ಆಚರಿಸಿದರೆ ಸಮಾಜದಲ್ಲಿ ಸಾಮರಸ್ಯದ. ಜೀವನ ನಿರ್ಮಾಣ ಸಾಧ್ಯ, ಕೊಣಾಜೆ ಪರಿಸರದ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಜತೆಗೂಡಿ ಹಬ್ಬಗಳನ್ನು ಆಚರಿಸುವುದರೊಂದಿಗೆ ಇದನ್ನು ತೋರಿಸಿಕೊಟ್ಟಿದ್ದಾರೆ ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು.

ಅವರು ಮಂಗಳ ಗ್ರಾಮೀಣ ಯುವಕ ಸಂಘ ಕೊಣಾಜೆ, ಮಂಗಳ ಮೊಸರು ಕುಡಿಕೆ ಉತ್ಸವ ಸಮಿತಿ ಕೊಣಾಜೆ, ನಾಗಬ್ರಹ್ಮ ಪ್ರಗತಿಪರ ಸ್ವಸಹಾಯ ಸಂಘ ಕೆಳಗಿನಮನೆ ಕೊಣಾಜೆ‌ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ 21ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಮಾರಂಭದ ಉದ್ಘಾಟನೆಯನ್ನು ಕೊಣಾಜೆ‌ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಪ್ರಸಾದ್ ರೈ ಕಲ್ಲಿಮಾರು ಅವರು ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರಾದ ರವೀಂದ್ರ ರೈ ಅವರು ವಹಿಸಿದ್ದರು.

ಕೊಣಾಜೆ ಪಂಚಾಯಿತಿ ಅಧ್ಯಕ್ಷರಾದ ಗೀತಾ ಡಿ ಕುಂದರ್ ಮಾಜಿ ಮೂಡಾ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಪಂಚಾಯಿತಿ ಸದಸ್ಯರಾದ ದೇವಣ್ಣಶೆಟ್ಟಿ, ದೈಹಿಕ ಶಿಕ್ಷಕ ರಾಜೀವ್ ನಾಯ್ಕ್ , ಎಪಿಎಂಸಿ ಮಾಜಿ ಉಪಾಧ್ಯಕ್ಷೆ ಮುತ್ತು ಶೆಡ್ತಿ, ಯುವಕ ಸಂಘದ ಮಾಜಿ ಅಧ್ಯಕ್ಷ ರಾದ ಅಬ್ದುಲ್ ರಹಿಮಾನ್ ಕೋಡಿಜಾಲ್, ಮಾಜಿ ಪಂ ಸದಸ್ಯರಾದ ಹಸನ್ ಕುಂಞಿ ಹಾಜಿ ಕೋಡಿಜಾಲ್, ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್ ಜಯಪ್ರಸಾದ್, ಅಬ್ದುಲ್ ರಜಾಕ್ ಗ್ರೀನ್ ಬಾಗ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ಸಂದರ್ಭ ಮಾದಕ ಪಿಡುಗುಗಳ ವಿರುದ್ಧ ಹೋರಾಟ ನಡೆಸುತ್ತಿರುವ ಹಾಶಿಮ್ ನಾಟೆಕಲ್, ನಿವೃತ್ತ ರಾಮಕೃಷ್ಣ ಪ್ರಾಥಮಿಕ ಶಾಲೆ ಅಧ್ಯಾಪಕರಾದ ಎಡ್ವರ್ಡ್ ಐಮನ್, ಕಲೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಉಮೇಶ್ ಪೂಜಾರಿ, ಕ್ರೀಡಾ ತರಬೇತಿ ಹಾಗೂ ಪ್ರೋತ್ಸಾಹಕರಾದ ಕಾರ್ತಿಕ್ ಕಿನ್ಯಾ, ಹಾಗೂ ಸ್ಥಳೀಯ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿನಿ ಕುಮಾರಿ ನಿಂಗವ್ವ ಮತ್ತು ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಮಾಸ್ಟರ್ ಭುವನ್, ವಿದ್ಯಾರ್ಥಿನಿಯರಾದ ಕುಮಾರಿ ತೈಬಾ, ಹಂಶಿಕ, ಬುಶ್ರಾ, ಪಾಯಿಝ, ಇರ್ಫಾನ, ಪ್ರೌಢಶಾಲಾ ಉತ್ತಮ ವಿದ್ಯಾರ್ಥಿನಿ ನಿಶಾ ಅಂಜುಮ್, ಪ್ರಾಥಮಿಕ ಶಾಲಾ ಉತ್ತಮ ವಿದ್ಯಾರ್ಥಿನಿ ಶಿಕಾ ಡಿ ಗಟ್ಟಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಭಕ್ತಿ ಗೀತೆ, ಹಾಗೂ ಮಡಿಕೆ ಹೊಡೆಯುವುದು, ಮುದ್ದುಕೃಷ್ಣ ಪುಟಾಣಿ ಕೃಷ್ಣ ರಾಧಾಕೃಷ್ಣ, ಸ್ಪರ್ಧೆ ನಡೆಸಲಾಯಿತು.

ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರು, ಮಂಗಳೂರು ವಿ ವಿ ಸಿಂಡಿಕೇಟ್ ಸದಸ್ಯರಾದ ಅಚ್ಯುತ ಗಟ್ಟಿ ರವರು ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಯುವಕ ಸಂಘದ ಮಾಜಿ ಅಧ್ಯಕ್ಷರಾದ ಅಬ್ದುನ್ ನಾಸೀರ್ ಕೆಕೆ ಸ್ವಾಗತಿಸಿದರು.ಯುವಕ ಸಂಘದ ಅಧ್ಯಕ್ಷರಾದ ಎಕೆ ಅಬ್ದುಲ್ ರಹಿಮಾನ್ ಕೋಡಿಜಾಲ್ ರವರು ವಂದಿಸಿದರು. ದೈಹಿಕ ಶಿಕ್ಷಕಿ ಸುರೇಖ ಹರೀಶ್ ಪೂಜಾರಿ ನಿರೂಪಿಸಿದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News