ಮಂಗಳೂರು: ಗುಂಪು ಹತ್ಯೆಗೀಡಾದ ವಲಸೆ ಕಾರ್ಮಿಕ ಕೇರಳಿಗ ?
Update: 2025-04-29 21:56 IST

ಮಂಗಳೂರು: ನಗರ ಹೊರವಲಯದ ಕುಡುಪು ಬಳಿ ರವಿವಾರ ಸಂಜೆ ಗುಂಪು ಹತ್ಯೆಗೀಡಾದ ವಲಸೆ ಕಾರ್ಮಿಕ ಕೇರಳಿಗ ಎಂದು ಹೇಳಲಾಗುತ್ತಿದೆ.
ಕೇರಳದ ವಯನಾಡಿನ ಪುಲ್ಪಳ್ಳಿ ಎಂಬಲ್ಲಿನ ಅಶ್ರಫ್ ಎಂಬಾತನಿಗೂ ಕುಡುಪು ಬಳಿ ಕೊಲೆಯಾದ ವಲಸೆ ಕಾರ್ಮಿಕನ ಫೋಟೊಕ್ಕೂ ಸಾಮ್ಯತೆ ಕಂಡು ಬಂದಿದೆ. ಅದರಂತೆ ಅಶ್ರಫ್‌ನ ಮನೆಯವರು ಮಂಗಳೂರಿ ನತ್ತ ಆಗಮಿಸುತ್ತಿದ್ದು, ಮೃತದೇಹವನ್ನು ಪರಿಶೀಲಿಸಿದ ಬಳಿಕ ಹತ್ಯೆಗೀಡಾದ ವ್ಯಕ್ತಿಯ ಗುರುತು ಸಿಗಬಹುದು ಎಂದು ಮೂಲಗಳು ತಿಳಿಸಿವೆ.
ಮೇಲ್ನೋಟಕ್ಕೆ ಗುಂಪು ಹಲ್ಲೆಯಿಂದ ಹತ್ಯೆಗೀಡಾದ ಯುವಕ ವಲಸೆ ಕಾರ್ಮಿಕ ಮತ್ತು ಮುಸ್ಲಿಂ ಎಂದು ಹೇಳಲಾಗುತ್ತಿದೆ. ಆದರೆ, ಅದಿನ್ನೂ ಖಚಿತಗೊಂಡಿಲ್ಲ. ಗುರುತು ಪತ್ತೆಯಾದ ಬಳಿಕವೇ ಸತ್ಯಾಂಶ ಹೊರಬೀಳಲಿದೆ.