ಮಂಗಳೂರು: ಎ.24ರಂದು ಹಜ್ ವ್ಯಾಕ್ಸಿನೇಷನ್ ಶಿಬಿರ

ಮಂಗಳೂರು, ಎ.22: ಕೇಂದ್ರ ಹಜ್ ಕಮಿಟಿ ಮೂಲಕ ಈ ವರ್ಷ ಹಜ್ ಯಾತ್ರೆ ಕೈಗೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯ ಹಜ್ ಯಾತ್ರಿಕರಿಗೆ ವ್ಯಾಕ್ಸಿನೇಷನ್ ಶಿಬಿರವನ್ನು ಎ.24ರಂದು ಮಂಗಳೂರಿನ ಜೆಪ್ಪಿನಮೊಗರುವಿನ ಯೇನಪೋಯ ಸ್ಕೂಲ್‌ನಲ್ಲಿ ಆಯೋಜಿಸಲಾಗಿದೆ.
ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ಎ.24ರಂದು ಬೆಳಗ್ಗೆ 8 ಗಂಟೆಗೆ ನಡೆಯಲಿದೆ, ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ವ್ಯಾಕ್ಸಿನೇಷನ್ ವೇಳೆ ಗೊಂದಲದ ಉಂಟಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರ್ದಿಷ್ಟ ಕವರ್ ನಂಬರ್ ನವರಿಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಲಾಗಿದೆ.
ಕವರ್ ನಂಬರ್ ಎಲ್ಲವೂ (KAF/KAR/KAWM) ಒಳಗೊಂಡಿದೆ. ವ್ಯಾಕ್ಸಿನೇಷನ್‌ಗೆ ನಿಗದಿಪಡಿಸಲಾದ ವೇಳಾಪಟ್ಟಿಯ ವಿವರ ಇಂತಿವೆ.
ಎ.24ರಂದು ಬೆಳಗ್ಗೆ 8:30 ರಿಂದ 9:30 ಕವರ್ ನಂಬರ್ 0001ರಿಂದ 1000 ರವರೆಗೆ , 9:30 - 10ರ ತನಕ ಕವರ್ ನಂಬರ್ 1001 ರಿಂದ 1500 ,
ಸಮಯ 10:00- 10:30 ಕವರ್ ನಂಬರ್ 1501 ರಿಂದ 2000, ಸಮಯ 10:30 - 11:30 ಕವರ್ ನಂಬರ್ 2000 ರಿಂದ 250, ಸಮಯ 11:30 - 12:00 ಕವರ್ ನಂಬರ್ 2501 ರಿಂದ 3000, ಸಮಯ 12:30 - 1:30 ಕವರ್ ನಂಬರ್ 3001 ರಿಂದ 3500, ಸಮಯ ಮ. 1:30ರಿಂದ ಕವರ್ ನಂಬರ್ 3500 ಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು.
ವ್ಯಾಕ್ಸಿನೇಷನ್ ಗೆ ಬರುವವರು ಕವರ್ ಇಂಕ್ವಯಿರಿ ರಿಸಿಪ್ಟ್ ಮತ್ತು ಒಂದು ವೈಟ್ ಬ್ಯಾಕ್ ಗ್ರೌಂಡ್ ಇರುವ ಪಾಸ್‌ಪೋರ್ಟ್ ಸೈಜ್ ಫೋಟೊ ಕಡ್ಡಾಯವಾಗಿ ತರಬೇಕಾಗಿದೆ. (cover inquiry Reciept) ಅಂದರೆ ಹಜ್ ಯಾತ್ರಿಕರು ಪ್ರಯಾಣಿಸುವ ವಿಮಾನದ ಸಮಯವನ್ನು ಇತರ ವಿಷಯಗಳನ್ನು ಒಳಗೊಂಡ ಪೇಜ್ ಪ್ರತಿ), ಮೆಡಿಕಲ್ ಸ್ಕ್ರೀನಿಂಗ್ ರಿಪೋರ್ಟ್‌ನ ಪ್ರತಿ ತರುವುದು ಅಗತ್ಯ. ವ್ಯಾಕ್ಸಿನೇಷನ್‌ಗೆ ದೂರವಾಣಿ ಮುಖಾಂತರ ಬುಕ್ಕಿಂಗ್ ಮಾಡುವ ಅಥವಾ ಮುಂಗಡವಾಗಿ ಕಾಯ್ದಿರಿಸುವ ಅವಕಾಶ ಇರುವುದಿಲ್ಲ.
ನಿಗದಿಪಡಿಸಲಾದ ಸಮಯದಲ್ಲಿ ಬಂದರೆ ವ್ಯಾಕ್ಸಿನೇಷನ್‌ಗೆ ಹೆಚ್ಚು ಅನುಕೂಲವಾಗುತ್ತದೆ. ವ್ಯಾಕ್ಸಿನೇಷನ್‌ನಲ್ಲಿ ಯಾರಿಗೂ ವಿಶೇಷ ಪ್ರಾಶಸ್ತ್ಯ ನೀಡಲಾಗುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.