ವೆನ್‌ಲಾಕ್ ಆಸ್ಪತ್ರೆಯಲ್ಲಿ 35 ಬೆಡ್ ಗಳ ಡಯಾಲಿಸಿಸ್ ಘಟಕ ಆರಂಭಿಸಲು ಸಚಿವ ದಿನೇಶ್ ಗುಂಡೂರಾವ್ ಸೂಚನೆ

Update: 2024-08-17 14:29 GMT

ಮಂಗಳೂರು: ವೆನ್ ಲಾಕ್ ಜಿಲ್ಲಾ ಆಸ್ಪತ್ರೆಯ ನೂತನ ಮೆಡಿಸಿನ್ ಬ್ಲಾಕ್ ನ 4ನೆ ಅಂತಸ್ತಿನಲ್ಲಿ 35ಬೆಡ್ ಗಳ ಡಯಾಲಿಸೀಸ್ ಘಟಕವನ್ನು ಶೀಘ್ರವಾಗಿ ಆರಂಭಿಸಲು ಕರ್ನಾಟಕ ರಾಜ್ಯ ಕುಟುಂಬ ಕಲ್ಯಾಣ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಕ್ತ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅವರು ವೆನ್ ಲಾಕ್ ಜಿಲ್ಲಾ ಆಸ್ಪತ್ರೆಯ ಆರ್ ಎಪಿಸಿಸಿ ಸಭಾಂಗಣದಲ್ಲಿ ಶನಿವಾರ ಆರೋಗ್ಯ ರಕ್ಷಾ ಸಮಿತಿಯ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿ ದ್ದರು.

ಹೊಸ ಡಯಾಲಿಸಿಸ್ ಸೆಂಟರನ್ನು ನಿರ್ಮಿಸಲು ಜಿಲ್ಲಾಧಿಕಾರಿಯ ಅನುಮತಿ ಪಡೆದು ಡಿಎಂಎಫ್ ಟಿ ಯಿಂದ ಒಂದು ಕೋಟಿ ರೂಪಾಯಿ, ಕೆಐಒಸಿಎಲ್ ಸಿಎಸ್ ಆರ್ ನಿಧಿಯಿಂದ 50ಲಕ್ಷ ರೂ, ನೋವಿಗೊ ಸೊಲ್ಯೂಷನ್ ವತಿಯಿಂದ 18ಲಕ್ಷ ರೂಪಾಯಿ ಪಡೆ ದಿದ್ದು ಉಳಿದ ಮೊತ್ತವನ್ನು ಇತರ ಸಂಸ್ಥೆಗಳ ಸಿಎಸ್ಆರ್ ನಿಧಿಯಿಂದ ಪಡೆದುಕೊಳ್ಳಲು ಪತ್ರವ್ಯವಹಾರ ನಡೆಸಲಾಗಿದೆ ಎಂದು ವೆನ್ ಲಾಕ್ ಅಧೀಕ್ಷಕರು ಸಭೆಯಲ್ಲಿ ಮಾಹಿತಿ ನೀಡಿದರು.

*ಕ್ಯಾನ್ಸರ್ ಚಿಕಿತ್ಸೆ:-ವೆನ್ ಲಾಕ್ ಆಸ್ಪತ್ರೆ ಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿಲ್ಲ ಎನ್ನುವ ದೂರಿನ ಬಗ್ಗೆ ಸಚಿವರು ಪ್ರಶ್ನಿಸಿದಾಗ, ಈ ಬಗ್ಗೆ ಕೆಎಂಸಿ ಆಸ್ಪತ್ರೆಯ ಡೀನ್ ಸುರೇಶ್ ಶೆಟ್ಟಿಯವರು ಸಭೆಗೆ ಮಾಹಿತಿ ನೀಡಿ ವೆನ್ಲಾಕ್ ಒಪಿಡಿ ವಿಭಾಗದಲ್ಲಿ ಪ್ರತಿ ದಿನ ಬೆಳಗ್ಗೆ 9ರಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಕ್ಯಾನ್ಸರ್ ತಜ್ಞರು ತಪಾಸಣೆ ನಡೆಸಿ ಕೆಎಂಸಿ ಆಸ್ಪತ್ರೆ ಯಲ್ಲಿ (ರೇಡಿಯೇಶನ್ ಒಂಕಾಲಜಿಸ್ಟ್ ). ಚಿಕಿತ್ಸೆ ನೀಡಲಾಗುತ್ತದೆ ಇನ್ನು ಮುಂದೆಯೂ ಈ ಚಿಕಿತ್ಸೆಯನ್ನು ಮುಂದುವರಿಸಲಾಗುವು ದು.ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಕ್ಯಾಥ್ ಲ್ಯಾಬ್ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

*ವೈದ್ಯಕೀಯ ಪ್ರಮಾಣ ಪತ್ರ ನೀಡಲು ಸೂಚನೆ:-ವೆನ್ ಲಾಕ್ ಆಸ್ಪತ್ರೆ ಯಲ್ಲಿ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಲಾಗುತ್ತಿಲ್ಲ ಎಂದು ಮನಪಾ ಸದಸ್ಯರೊಬ್ಬರು ನೀಡಿದ ದೂರಿನ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ಸ್ಪಂದಿಸಿ ವೈದ್ಯಕೀಯ ಪ್ರಮಾಣ ಪತ್ರ ನೀಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

* ವೆನ್ ಲಾಕ್ ಆಸ್ಪತ್ರೆಯ ಮಧ್ಯಭಾಗದಿಂದ ಸಾಗುವ ರೈಲ್ವೆ ಸ್ಟೇಶನ್ ರಸ್ತೆ ಯನ್ನು ರೋಗಿಗಳ ಸಾಗಾಟಕ್ಕೆ ತೊಂದರೆ ಯಾಗುತ್ತಿರುವ ಕಾರಣ ಸಾರ್ವಜನಿಕ ಉಪಯೋಗದಿಂದ ಮುಕ್ತಗೊಳಿಸಿ ವೆನ್ ಲಾಕ್ ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆದಿರುವ ಬಗ್ಗೆ ಅಧೀಕ್ಷಕರು ಸಭೆಗೆ ಮಾಹಿತಿ ನೀಡಿದರು.

ವೆನ್ ಲಾಕ್ ಆಸ್ಪತ್ರೆಯ ಹಳೆ ಲಾಂಡ್ರಿ ಕಟ್ಟಡವನ್ನು ಕೆಡವಿ,ಸದ್ರಿ ಸ್ಥಳವನ್ನು 50ಬೆಡ್ ಗಳ ತುರ್ತು ನಿಗಾ ಘಟಕ ನಿರ್ಮಿಸಲು ಸದ್ರಿ ಸ್ಥಳವನ್ನು ಗುರುತಿಸಲಾಗಿದೆ ಒಂದು ಅಧೀಕ್ಷ ರು ಸಭೆಗೆ ಮಾಹಿತಿನೀಡಿದರು.

ಸಭೆಯಲ್ಲಿ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆನಂದ, ಎಸ್ ಪಿ ಯತೀಶ್ ಎನ್ , ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ ಸೋಜ, ಡಾ.ಮಂಜುನಾಥ ಭಂಡಾರಿ, ಮನಪಾ ಸದಸ್ಯ ವಿನಯ ರಾಜ್, ವೆನ್ ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಜೆಸಿಂತಾ ಡಿ ಸೋಜ ಮೊದಲಾದವರು ಉಪಸ್ಥಿ ತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News