ಮೂಡಬಿದಿರೆ : ನೂತನ ಧಾರ್ಮಿಕ ಕೇಂದ್ರ “ಫಲಾಹೆ ದಾರೈನ್”ಗೆ ಶಿಲಾನ್ಯಾಸ

Update: 2024-11-21 09:40 GMT

ಮೂಡಬಿದಿರೆ : ಮದ್ರಸಗಳು ಧಾರ್ಮಿಕ ಶಾಂತಿಯ ಕೇಂದ್ರಗಳಾಗಿವೆ. ಇದರಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಭೌತಿಕ ಹಾಗೂ ಸಾಮಾಜಿಕ ಮೌಲ್ಯಗಳ ಬಗ್ಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ ಎಂದು ಭಟ್ಕಳ ಖಾಝಿ ಮೌಲಾನಾ ಅಬ್ದುಲ್ ರಬ್ಬ್ ಅವರು ಹೇಳಿದರು.

ಅವರು ಮೂಡಬಿದ್ರೆಯ ಕಾನ ಎಂಬಲ್ಲಿ ನೂತನ ಧಾರ್ಮಿಕ ಕೇಂದ್ರವಾದ “ಫಲಾಹೆ ದಾರೈನ್” ಇದರ ಶಿಲಾನ್ಯಾಸವನ್ನು ಮಾಡಿ ಆಶೀರ್ವಚನವನ್ನು ನೀಡಿದರು. ದಾರುಲ್ ಉಲೂಮ್ ಅಲ್ ಮಆರಿಫ್ ಇದರ ಪ್ರಾಂಶುಪಾಲರಾದ ಮುಫ್ತಿ ಅಬ್ದುಲ್ ರಹಿಮಾನ್ ಅಲ್ ಕಾಸಿಮೀ ಅವರು ಉಪನ್ಯಾಸವನ್ನು ನೀಡಿದರು.

ವೇದಿಕೆಯಲ್ಲಿ ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಮುಫ್ತಿ ಮುಹಮ್ಮದ್ ನಾಸಿರ್, ಖಾಝಿ ಮಂಗಳೂರು, ಹಾಗೂ ಮುಫ್ತಿ ರಿಯಾಝ್ ರಶಾದಿ ಉಪಸ್ಥಿತರಿದ್ದರು.

ಕುರ್‌ಆನ್ ಪಠಣದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪ್ರಾಂಶುಪಾಲರಾದ ಮೌಲಾನಾ ರಹ್ಮಮತುಲ್ಲಾ ನದ್ವಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಧನ್ಯವಾದದೊಂದಿಗೆ ಸಭೆಯು ಮುಕ್ತಾಯಗೊಂಡಿತು. ಆಗಮಿಸಿದವರಿಗೆ ಲಘು ಉಪಹಾರವನ್ನು ನೀಡಲಾಯಿತು.

Delete Edit
Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News