ಉಳ್ಳಾಲ ದರ್ಗಾದಲ್ಲಿ ಹಜ್ ತರಬೇತಿ ಶಿಬಿರ

Update: 2024-05-07 08:50 GMT

ಉಳ್ಳಾಲ, ಮೇ 7: ಉಳ್ಳಾಲ ಜುಮಾ ಮಸೀದಿ (402) ಮತ್ತು ಸೈಯದ್ ಮದನಿ ದರ್ಗಾ ಸಮಿತಿಯ ಆಶ್ರಯದಲ್ಲಿ ಹಜ್ ತರಬೇತಿ ಶಿಬಿರವು ಉಳ್ಳಾಲ ಮದನಿ ಹಾಲ್ ನಲ್ಲಿ ಮಂಗಳವಾರ ನಡೆಯಿತು.

ಸುನ್ನಿ ಜಂಇಯ್ಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ ಎಸ್ ಪಿ.ಹಂಝ ಸಖಾಫಿ ತರಗತಿ ನಡೆಸಿ ಹಜ್ ನಿರ್ವಹಣೆಗಿರುವ ಕಡ್ಡಾಯ ಕರ್ಮಗಳು ಹಾಗೂ ನಿಬಂಧನೆಗಳ ಬಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ ಹಜ್ ಯಾತ್ರಾರ್ಥಿಗಳಿಗೆ ಶುಭ ಹಾರೈಸಿದರು.

ಸೈಯದ್ ಮದನಿ ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಅಹ್ಮದ್ ಕುಟ್ಟಿ ಸಖಾಫಿ ದುಆ ನೆರವೇರಿಸಿದರು.

ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ಫಾರೂಕ್ ಮುಕ್ಕಚ್ಚೇರಿ, ಸೈಯದ್ ಮದನಿ ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಹಾಜಿ ಕೋಡಿ, ದರ್ಗಾ ಸಮಿತಿಯ ಸದಸ್ಯ ತಂಝೀಲ್ ಮುಕ್ಕಚ್ಚೇರಿ ಉಪಸ್ಥಿತರಿದ್ದರು

ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News