ಅಕ್ರಮ ಮರಳುಗಾರಿಕೆ ಆರೋಪ: ಪಾವೂರು ಉಳಿಯ ದ್ವೀಪದ ಸರ್ವೆ ನಡೆಸಲು ಸ್ಪೀಕರ್ ಯುಟಿ ಖಾದರ್ ಸೂಚನೆ

Update: 2024-09-27 16:29 GMT

ಮಂಗಳೂರು: ಪಾವೂರು ಗ್ರಾಮದ ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆಯ ನಡೆಯುತ್ತಿದೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದ್ವೀಪದ ಜಮೀನಿನ ವಿಸ್ತೀರ್ಣದ ವಾಸ್ತವ ಅರಿಯಲು ಅಧಿಕೃತ ಸರ್ವೆ ನಡೆಸಲು ಸ್ಪೀಕರ್ ಯು.ಟಿ.ಖಾದರ್ ದ.ಕ. ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಈ ಬಗ್ಗೆ Satellite images ಅನ್ನು Google Engine Portal ಮೂಲಕ ತೆಗೆಯಬೇಕು ಮತ್ತು ಅಧಿಕೃತ ಸರ್ವೆಯರ್ ಮೂಲಕ ಸರ್ವೆ ನಡೆಸಬೇಕು. ಕಂದಾಯ ಇಲಾಖೆಯ ಅಧಿಕೃತ ದಾಖಲೆಯ ಪ್ರಕಾರ ಈ ಹಿಂದೆ ದ್ವೀಪದ ಮೂಲ ವಿಸ್ತೀರ್ಣ ಎಷ್ಟಿತ್ತು ಮತ್ತು ಈಗ ಎಷ್ಟಿದೆ? ವಿಸ್ತೀರ್ಣದಲ್ಲಿ ಕೊರತೆ ಕಂಡು ಬಂದಿದ್ದರೆ ಅದಕ್ಕೆ ಕಾರಣ ಏನು? ಎಂಬುದರ ಬಗ್ಗೆ ಸರ್ವೆ ನಡೆಸಿ ವರದಿ ನೀಡುವಂತೆ ಖಾದರ್ ನಿರ್ದೇಶನ ನೀಡಿದ್ದಾರೆ.

ಈಗಾಗಲೆ ಈ ಭಾಗದ ಜನರು ಅಕ್ರಮ ಮರಳುಗಾರಿಕೆಯ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಅದರಂತೆ ಅಕ್ರಮ ಮರಳು ಗಾರಿಕೆ ತಡೆಯಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿರುವೆ. ಅಧಿಕೃತ ಸರ್ವೆ ನಡೆಸಿದ ಬಳಿಕ ವಾಸ್ತವ ತಿಳಿಯ ಲಿದೆ. ಮರಳುಗಾರಿಕೆಯಿಂದ ದ್ವೀಪದ ವಿಸ್ತೀರ್ಣದಲ್ಲಿ ಕಡಿಮೆ ಕಂಡು ಬಂದಿದ್ದರೆ ಅಕ್ರಮ ಮರಳುಗಾರಿಕೆ ನಡೆಸುವವರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗಿದೆ. ದ್ವೀಪದ ಮೂಲಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಲು ತಿಳಿಸಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಸ್ಪೀಕರ್‌ರ ನಿರ್ದೇಶನದ ಮೇರೆಗೆ ಈಗಾಗಲೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು, ಮಂಗಳೂರು ನಗರ ದಕ್ಷಿಣ ಉಪವಿಭಾಗದ ಪೊಲೀಸ್ ಉಪಾಯುಕ್ತರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಹಿತ 6 ಮಂದಿಯ ತನಿಖಾ ಸಮಿತಿಯನ್ನು ರಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News