ನಿಟ್ಟೆಯಲ್ಲಿ ಮಹಿಳಾ ಎಐ ಹ್ಯಾಕಥಾನ್
ನಿಟ್ಟೆ, ನ.23: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಡೆವ್ ರೆವ್ ಹಾಗೂ ಜಿಆರ್-ಎಐ-ಸಿಇ ಕಂಪೆನಿ ಆಶ್ರಯದಲ್ಲಿ 2 ವಾರಗಳ ಮಹಿಳಾ ಎಐ ಹ್ಯಾಕಥಾನ್ ಈವೆಂಟ್‌ನ ಓರಿಯಂಟೇಶನ್ ಮತ್ತು ಇಂಡಕ್ಷನ್ ಕಾರ್ಯಕ್ರಮ ನ.18ರಂದು ಆರಂಭಗೊಂಡಿತು.
ನಿಟ್ಟೆ ತಾಂತ್ರಿಕ ಕಾಲೇಜು, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್ ಮತ್ತು ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡೆವ್ ರೆವ್‌ನ 12 ಮಂದಿ ನುರಿತ ತರಬೇತುದಾರರ ತಂಡ ನಿಟ್ಟೆ ಹ್ಯಾಕಥಾನ್‌ಗೆ ಚಾಲನೆ ನೀಡಿದರು.
ಹ್ಯಾಕಥಾನ್‌ನ ವಿಜೇತರನ್ನು ಡಿಸೆಂಬರ್‌ನಲ್ಲಿ ಘೋಷಿಸಲಾಗುವುದು ಮತ್ತು ವಿಜೇತರು ಆಕರ್ಷಕ ನಗದು ಬಹುಮಾನ ಗಳನ್ನು ಮತ್ತು ಡೆವ್ ರೆವ್ ಅವರೊಂದಿಗೆ ಇಂಟರ್ನ್‌ಶಿಪ್‌ಗೆ ಅವಕಾಶವನ್ನು ಪಡೆಯುತ್ತಾರೆ. ಕೌನ್ಸೆಲಿಂಗ್, ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್‌ಮೆಂಟ್ ವಿಭಾಗದ ಮುಖ್ಯಸ್ಥ ಭರತ್ ಜಿ ಕುಮಾರ್ ಸ್ವಾಗತಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಹ್ಯಾಕರ್ ಅರ್ತ್ ಕ್ಲಬ್ ಕಾರ್ಯಕ್ರಮವನ್ನು ಆಯೋಜಿಸಿದೆ.