ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಕುಲ್ಲಾ ಖಾನ್‌ರ ಸ್ಮರಣೆ ಕಾರ್ಯಕ್ರಮ
Update: 2024-12-19 13:42 GMT
ಮಂಗಳೂರು: ಸ್ವಾತಂತ್ರ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕುಲ್ಲಾ ಖಾನ್ ಅವರನ್ನು 1927ರ ಡಿ.19ರಂದು ಬ್ರಿಟಿಷರು ಗಲ್ಲಿಗೇರಿಸಿದ ಸ್ಮರಣೆ ದಿನ ಕಾರ್ಯಕ್ರಮ ಎಐಡಿಎಸ್‌ಒ ವತಿಯಿಂದ ನಡೆಯಿತು.
ನಗರದ ಬಿಇಎಂ ಪ್ರೌಢಶಾಲೆ ಮತ್ತು ಕದ್ರಿ ಮಲ್ಲಿಕಟ್ಟೆಯ ನೇತಾಜಿ ಸುಭಾಸ್‌ಚಂದ್ರ ಬೋಸ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಹುತಾತ್ಮ ದಿನವನ್ನು ಸ್ಮರಿಸಲಾಯಿತು.
ಎಐಡಿಎಸ್‌ಒ ಜಿಲ್ಲಾ ಸಂಚಾಲಕ ವಿನಯ್‌ಚಂದ ಎಸ್.ವಿ. ಮಾತನಾಡಿ ಪ್ರಸಕ್ತ ಕಾಲಘಟ್ಟದಲ್ಲಿ ಕೋಮು ಸೌಹಾರ್ದ ಬಲಪಡಿಸುವ ಅಗತ್ಯವಿದೆ. ಜನರ ಮೂಲಭೂತ ಸಮಸ್ಯೆಗಳ ವಿರುದ್ಧ ಮಾಡಲಾಗುವ ಹೋರಾಟಗಳನ್ನು ಹತ್ತಿಕ್ಕಲು ಪ್ರಯತ್ನಿಸುವ ಸರಕಾರಗಳ ನೀತಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದರು.