ದೇರಳಕಟ್ಟೆಯಲ್ಲಿ ಬೀ ಸ್ಮಾರ್ಟ್ ಕಾರ್ಯಾಗಾರ ಉದ್ಘಾಟನೆ
ಕೊಣಾಜೆ: ಸಮಾಜದಲ್ಲಿ ಬೇರೂರಿರುವಂತಹ ದುರ್ವ್ಯಸನ ಹಾಗೂ ಕೆಡುಕುಗಳನ್ನು ಪ್ರತಿ ಮೊಹಲ್ಲಾದಲ್ಲಿ ನಿರಂತರ ಸಮಾಲೋಚನೆಯ ಮೂಲಕ ಹೋಗಲಾಡಿಸಬೇಕಾಗಿದೆ ಎಂದು ಸಮಸ್ತ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ನಾಟಕಲ್ ಅಬೂಬಕರ್ ಹಾಜಿ ರವರು ಹೇಳಿದರು.
ಅವರು ದೇರಳಕಟ್ಟೆ ರೇಂಜ್ ಮದ್ರಸ ಮೇನೆಜ್ ಮೆಂಟ್ ಹಾಗೂ ಸಮಸ್ತ ಕೇರಳ ಜಯಿಯತುಲ್ ಮುಅಲ್ಲಿಮೀನ್ ಇದರ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ನಡೆದ ಬೀ ಸ್ಮಾರ್ಟ್ ತರಬೇತಿ ಕಾರ್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮಕ್ಕೆ ಇಬ್ರಾಹಿಂ ದಾರಿಮಿ ದುಆ ದೊಂದಿಗೆ ಚಾಲನೆ ನೀಡಲಾಯಿತು. ದೇರಳಕಟ್ಟೆಯ ಕೇಂದ್ರ ಜುಮಾ ಮಸೀದಿ ಖತೀಬ್ ಮಹಮ್ಮದ್ ತಾಜುದ್ದೀನ್ ರಹಮಾನಿ ಕಾರ್ಯಕ್ರಮ ಉದ್ಘಾಟಿಸಿದರು.
ಬೀ ಸ್ಮಾರ್ಟ್ ವಿಶೇಷ ತರಬೇತಿ ಕಾರ್ಯಗಾರವನ್ನು ರೇಂಜ್ ವ್ಯಾಪ್ತಿಯ ಮೊಹಲ್ಲ ಆಡಳಿತ ಸಮಿತಿ ಪದಾಧಿಕಾರಿಗಳಿಗೆ ಹಾಗೂ ಮುಅಲ್ಲಿಮರಿಗೆ ಆಯೋಜಿಸಲಾಗಿತ್ತು. ಸಿರಾಜ್ ಹುದವಿ ಹಾಗೂ ಇಕ್ಬಾಲ್ ನಂದರಬೆಟ್ಟು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.
ಅಸೋಸಿಯೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ ಹಾಗೂ ದೇರಳಕಟ್ಟೆ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷರಾದ ಹಾಜಿ ಅಬ್ದುಲ್ ಆರ್ ಅಹ್ಮದ್ ಶೀಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ದೇರಳಕಟ್ಟೆ ರೇಂಜ್ ಜಂಯಿತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ದಾರಿಮಿ, ಕೋಶಾಧಿಕಾರಿ ಅಬೂಬಕರ್ ಹಾಜಿ, ರೇಂಜ್ ಮ್ಯಾನೇಜ್ಮೆಂಟ್ ಉಪಾಧ್ಯಕ್ಷರಾದ ಸಿರಾಜುದ್ದೀನ್ ಅಲಂಕಾರ್, ಮಹಮ್ಮದ್ ಮುಸ್ತಫಾ ಹರೇಕಳ, ಕೋಶಾಧಿಕಾರಿ ಮೊಹಮ್ಮದ್ ಮೋನು ಇನೋಳಿ, ಜಿಲ್ಲಾ ಕೌನ್ಸಿಲರ್ ಮೊಹಮ್ಮದ್ ಪನೀರ್, ದೇರಳಕಟ್ಟೆ ಹಯಾತುಲ್ ಇಸ್ಲಾಂ ಮದರಸಾ ಉಸ್ತುವಾರಿ ಸಯ್ಯಿದಲಿ, ಹನೀಫ್ ಜೆ ಹಾಗೂ ರೇಂಜ್ ವ್ಯಾಪ್ತಿಯ ವಿವಿಧ ಮೊಹಲ್ಲಾದ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಉಸ್ತಾದರು ಉಪಸ್ಥಿತರಿದ್ದರು.
ದೇರಳಕಟ್ಟೆ ರೇಂಜ್ ಮ್ಯಾನೇಜ್ಮೆಂಟ್ ಪ್ರಧಾನ ಕಾರ್ಯದರ್ಶಿ ಸಿಎಂ ಶರೀಫ್ ಪಟ್ಟೋರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೊತೆ ಕಾರ್ಯದರ್ಶಿ, ಶಫೀಕ್ ಆರ್ಕಾಣ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ರೇಂಜ್ ಜಮೀಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ರಹ್ಮಾನಿ ವಂದಿಸಿದರು.