ಕಂಬಳದಲ್ಲಿ ರಾಜಕೀಯ ಇರಬಾರದು: ಮಿಥುನ್ ರೈ
ಕೂಳೂರು: ದ.ಕ. ಜಿಲ್ಲಾ ಸಂಸದ ಬ್ರಿಜೇಶ್ ಚೌಟ ಅವರ ಸಾರಥ್ಯದಲ್ಲಿ ಮಂಗಳೂರು ಕಂಬಳ ಶನಿವಾರ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಆವರಣದಲ್ಲಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕಂಬಳ ಸಂಘಟಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತಮಾಡಿ, ಕಂಬಳದಲ್ಲಿ ರಾಜಕೀಯ ಇರಬಾರದು. ಕಂಬಳ ಸಂಘಟನೆ ಮತ್ತು ಸಂಘಟಕರಿಗೆ ಜಾತಿ ಧರ್ಮ ರಾಜಕೀಯದ ಪರಿದಿ ಇರಬಾರದು ಎಂದು ನುಡಿದರು.
ಕಳೆದ ಬಾರಿ ಬೆಂಗಳೂರಿನಲ್ಲಿ, ಈ ಬಾರಿ ಶಿವಮೊಗ್ಗದಲ್ಲಿ ಮುಂದಿನ ವರ್ಷ ಮುಂಬೈನಲ್ಲಿ ಕಂಬಳ ನಡೆಸುವ ಬಗ್ಗೆ ಚಿಂತನೆ ಗಳು ನಡೆಯುತ್ತಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕಂಬಳ ನಡೆಸಲು ತೀರ್ಮಾನಿಸಲಾಗಿದೆ. ಮುಂದಿನ ಗಣರಾ ಜ್ಯೋತ್ಸವದ ಪರೇಡ್ ನಲ್ಲಿ ಕಂಬಳ ಕೋಣಗಳನ್ನು ನಡೆಸುವ ಕೆಲಸನ್ನು ಸಂಸದರು ಮಾಡಬೇಕಿದೆ ಎಂದು ನುಡಿದರು.
ಕಂಬಳ ಸಮಿತಿಯ ಗೌರವಾಧ್ಯಕ್ಷ ಹಾಗೂ ಎಂ.ಆರ್.ಜಿ. ಗ್ರೂಪ್ ಸಿ.ಎಂ.ಡಿ. ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಉಮಾನಾಥ ಎ. ಕೋಟ್ಯಾನ್, ರಾಜೇಶ್ ನಾಯಕ್ ಯು., ಅಶೋಕ್ ಕುಮಾರ್ ರೈ, ಗುರ್ಮೆ ಸುರೇಶ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಐವಾನ್ ಡಿ'ಸೋಜ, ಸಂಗೀತ ಮಾಂತ್ರಿಕ ಗುರುಕಿರಣ್, ಮಾಜಿ ಶಾಸಕ ಮೊಯ್ದಿನ್ ಬಾವ ಮೊದಲಾದವರು ಉಪಸ್ಥಿತರಿದ್ದರು.