ದೇರಳಕಟ್ಟೆ: ಜಲಾಲ್ ಬಾಗ್ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಶಿಲಾನ್ಯಾಸ

Update: 2025-02-12 10:27 IST
ದೇರಳಕಟ್ಟೆ: ಜಲಾಲ್ ಬಾಗ್ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಶಿಲಾನ್ಯಾಸ
  • whatsapp icon

ಕೊಣಾಜೆ: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಲಾಲ್ ಬಾಗ್ 12ನೇ ವಾರ್ಡ್ ನಿಂದ 13ನೇ ವಾರ್ಡ್ ಗೆ ಸಂಪರ್ಕ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಕೋಟೆಕಾರು ಪಟ್ಟಣ ಪಂಚಾಯತ್ ನ 15ನೇ ಹಣಕಾಸು ಯೋಜನೆಯಡಿಯಲ್ಲಿ ನಿರ್ಮಾಣವಾಗುವ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಜಲಾಲ್ ಬಾಗ್ ಅರಫಾ ಜುಮಾ ಮಸೀದಿಯ ಆಧ್ಯಕ್ಷ ಎ.ಎ.ಹೈದರ್ ಪರ್ತಿಪ್ಪಾಡಿ ಚಾಲನೆ ನೀಡಿದರು.

ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯೆ ಆಯಿಶ ಡಿ. ಅಬ್ಬಾಸ್, ಮಾಜಿ ಸದಸ್ಯ ಡಿ.ಎಂ.ಮುಹಮ್ಮದ್, ಸಮಾಜಸೇವಕ ಪಿ.ಎಂ ಇಬ್ರಾಹೀಂ ಖತರ್, ಸ್ಥಳದಾನಿ ಲವೀನಾ ಡಿಸೋಜ, ಜಲಾಲ್ ಬಾಗ್ ಫ್ರೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷ ಅಲಿ ಹಸನ್, ಪ್ರಧಾನ ಕಾರ್ಯದರ್ಶಿ ಹಮೀದ್ ಪಜೀರ್, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಅಧ್ಯಕ್ಷ ಡಿ.ಎಂ ಫೈಝಲ್, ಉದ್ಯಮಿಗಳಾದ ಎಸ್.ಎ ಝೀರಾರ್ ಅಬ್ದುಲ್ಲಾ, ಡಿ.ಎಂ ರಿಯಾಝ್, ಸ್ಥಳೀಯರಾದ ಮುಹಮ್ಮದ್, ಹಮೀದ್, ಸಫೀಯಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News