ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಗೆ ಸುನ್ನಿ ಸಂಘಟನೆಗಳ ಶ್ಲಾಘನೆ

ಮಂಗಳೂರು, ಮಾ.19: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ 75 ಕೋ.ರೂ. ಮೌಲ್ಯದ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಿದ ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಗೆ ಸುನ್ನಿ ಸಂಘಟನೆಗಳಾದ ಕರ್ನಾಟಕ ಮುಸ್ಲಿಂ ಜಮಾತ್, ಎಸ್‌ವೈಎಸ್, ಎಸೆಸ್ಸೆಫ್ ಮಂಗಳೂರು ವಲಯ ಸಮಿತಿಯು ಶ್ಲಾಘಿಸಿದೆ.
ಸುನ್ನಿ ಸಂಘಟನೆಗಳ ಪ್ರತಿನಿಧಿಗಳು ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್, ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್ ಹಾಗೂ ರವೀಶಂಕರ್, ಎಸಿಪಿ ಮನೋಜ್ ಕುಮಾರ್, ಇನ್‌ಸ್ಪೆಕ್ಟರ್ ರಫೀಕ್ ಹಾಗೂ ಎಸ್ಸೈಗಳಾದ ರಾಜೇಂದ್ರ, ಶರಣಪ್ಪಮತ್ತು ಸುಮಾರು 30ಕ್ಕೂ ಅಧಿಕ ಸಿಬ್ಬಂದಿಗಳನ್ನು ಸನ್ಮಾನಿಸಿದರು.
ಮುಸ್ಲಿಂ ಜಮಾಅತ್ ನಾಯಕರಾದ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ವಿಎ ಮುಹಮ್ಮದ್ ಸಖಾಫಿ, ಸಲೀಂ ಅಡ್ಯಾರ್ ಪದವು, ಅಬ್ದುಲ್ ಹಮೀದ್, ಎಸೆಸ್ಸೆಫ್ ರಾಜ್ಯ ನಾಯಕರಾದ ಅಲಿ ತುರ್ಕಳಿಕೆ, ಇರ್ಷಾದ್ ಹಾಜಿ ಗೂಡಿನಬಳಿ, ಎಸ್‌ವೈಎಸ್ ನಾಯಕರಾದ ಸತ್ತಾರ್ ಸಖಾಫಿ, ನಝೀರ್ ಲೂಲು, ಹಸನ್ ಪಾಂಡೇಶ್ವರ, ಕೆಸಿ ಸುಲೈಮಾನ್ ಮುಸ್ಲಿಯಾರ್, ಜಬ್ಬಾರ್ ಕಣ್ಣೂರು, ಸಿದ್ದೀಕ್ ಟೈಲರ್, ರಶೀದ್ ಐಬಿಎಂ ಉಪಸ್ಥಿತರಿದ್ದರು.
ಮುಸ್ಲಿಂ ಜಮಾತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಕಾರ್ಯಕ್ರಮ ನಿರೂಪಿಸಿದರು. ನವಾಝ್ ಸಖಾಫಿ ಅಡ್ಯಾರ್ ಪದವು ವಂದಿಸಿದರು.