ಮಂಗಳೂರು: ಸ್ನೇಹ ಸಮ್ಮಿಲನ -ಇಫ್ತಾರ್ ಕೂಟ
Update: 2025-03-19 20:45 IST

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ಹಾಗೂ ಪಯೋನೀರ್ ಕಾಂಪ್ಲೆಕ್ಸ್ ವ್ಯಾಪಾರಸ್ಥರ ಸಂಘದ ಜಂಟಿ ಆಶ್ರಯದಲ್ಲಿ ಸ್ನೇಹ ಸಮ್ಮಿಲನ ಹಾಗೂ ಇಫ್ತಾರ್ ಕೂಟವು ನಡೆಯಿತು.
ಸಮಿತಿಯ ಅಧ್ಯಕ್ಷ ಇಲ್ಯಾಸ್ ಬೆಂಗ್ರೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಟಿಯು ಮಂಗಳೂರು ನಗರ ಜಿಲ್ಲಾಧ್ಯಕ್ಷ ಇರ್ಫಾನ್ ಕಾನ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅತಿಥಿಯಾಗಿ ಎಸ್‌ಡಿಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹಿಮಾನ್ ಬೋಳಿಯಾರ್ ಭಾಗವಹಿಸಿ ಮಾತನಾಡಿದರು. ಎಸ್‌ಡಿಟಿಯು ಮಂಗಳೂರು ನಗರ ವಲಯಾಧ್ಯಕ್ಷ ಇಕ್ಬಾಲ್ ಬಿ.ಪಿ., ಮೊಡಲ್ ಇನ್ ಮೈಂಡ್ ಮಾಲಕ ಹಮೀದ್ ಷಾ, ಅಕ್ಬರ್ ರಾಝ ಉಪಸ್ಥಿತರಿದ್ದರು. ಮುಸ್ತಫಾ ಪರ್ಲಿಯಾ ಕಾರ್ಯಕ್ರಮ ನಿರೂಪಿಸಿದರು.