ಮನೆಯಿಂದ ಚಿನ್ನಾಭರಣ ಕಳವು: ಪ್ರಕರಣ ದಾಖಲು

ಮಂಗಳೂರು: ನಗರದ ಮಂಕಿಸ್ಟಾಂಡ್‌ನಲ್ಲಿರುವ ವಿಯೋಲೆಕ್ಸ್ ಎಂಬ ಹೆಸರಿನ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಚಿನ್ನ ಮತ್ತು ನಗದು ಕಳವುಗೈದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ಮಾ.16ರಂದು ಸಂಜೆ 5:30ಕ್ಕೆ ಮನೆಗೆ ಬೀಗ ಹಾಕಿ ಮಣಿಪಾಲಕ್ಕೆ ಹೋಗಿದ್ದು, ಮರುದಿನ ಸಂಜೆ 6:45ಕ್ಕೆ ಬಂದು ಮನೆಯ ಬಾಗಿಲು ತೆಗೆಯಲು ಪ್ರಯತ್ನಿದೆ. ಬಾಗಿಲು ತೆರೆಯಲು ಆಗದ ಕಾರಣ ಹಿಂಬ ದಿಯ ಬಾಗಿಲಿನಿಂದ ಮನೆಯ ಒಳಗೆ ಹೋಗಿ ನೋಡಿದಾಗ ಮುಂದಿನ ಬಾಗಿಲಿನ ಲಾಕರನ್ನು ಯಾರೋ ಕಳ್ಳರು ಮುರಿದಿರುವುದು ಕಂಡು ಬಂದಿದೆ. ಅಲ್ಲದೆ ಎಲ್ಲಾ ಕಡೆಗಳಲ್ಲಿ ಮನೆಯ ವಸ್ತುಗಳು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು, ಬೆಡ್‌ರೂಮ್‌ನಲ್ಲಿದ್ದ ಲಾಕರ್ ಒಪನ್ ಆಗಿತ್ತು. ಲಾಕರ್‌ನ ಡ್ರಾವೆರ್‌ನಲ್ಲಿದ್ದ ಚಿನ್ನದ 5 ಗ್ರಾಮ್ ತೂಕದ 2 ಉಂಗುರಗಳು ಹಾಗೂ 3 ಗ್ರಾಮ್ ತೂಕದ ಚಿನ್ನದ ಪದಕ, ಲಾಕರ್‌ನಲ್ಲಿದ್ದ 15,000 ರೂ. ನಗದನ್ನು ಕಳವು ಮಾಡಲಾಗಿದೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ 80,000 ರೂ. ಹಾಗೂ 15,000 ರೂ. ನಗದು ಕಳವಾಗಿದೆ ಎಂದು ವೈಟ್ ಮೊಂತೆರೋ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.