ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ದಿನಾಚರಣೆ

ಮಂಗಳೂರು, ಎ.9: ಮಂಗಳೂರು ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎಪ್ರಿಲ್ 7ರಂದು ವಿಶ್ವ ಆರೋಗ್ಯ ದಿನಾಚರಣೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ವೈದ್ಯಕೀಯ ಅಧೀಕ್ಷಕ ಡಾ. ಹಬೀಬ್ ರಹಮಾನ್ ಎ ಎ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಯೆನೆಪೋಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಮೂಸಬ್ಬ ಉಪ ಪ್ರಾಂಶುಪಾಲರಾದ ಡಾ. ಪ್ರಕಾಶ್ ಆರ್ ಎಮ್ ಸಲ್ಡಾನ್ಹ, ಹೆರಿಗೆ ಮತ್ತು ಸ್ರೀ ರೋಗ ವಿಭಾಗದ ಮುಖ್ಯಸ್ಥರಾದ ಡಾ. ರಾಜಗೋಪಾಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಶಿಶು ಮತ್ತು ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಸಹನ ಕೆ.ಎಸ್ ಈ ವರ್ಷದ ಘೋಷ ವಾಕ್ಯದಂತೆ ಶಿಶು ಮತ್ತು ಮಕ್ಕಳ ಆರೈಕೆ, ಪಾಲನೆ ಪೋಷಣೆ, ನೈರ್ಮಲ್ಯದ ಬಗ್ಗೆ ಮಾಹಿತಿ ನೀಡಿದರು.
ಹೆರಿಗೆ ಮತ್ತು ಸ್ರೀ ರೋಗ ವಿಭಾಗದ ಪ್ರಾಧ್ಯಾಪಕಿ ಡಾ. ರಾಜಲಕ್ಷ್ಮೀ ಪ್ರಸವ ಪೂರ್ವ ಮತ್ತು ಪ್ರಸವ ನಂತರದ ತಾಯಿ ಮತ್ತು ಮಗುವಿನ ಆರೈಕೆ, ಆಹಾರ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವಿಭಾಗದ ವಿದ್ಯಾರ್ಥಿಗಳಿಂದ ವಿಶ್ವ ಆರೋಗ್ಯ ದಿನದ ಮಹತ್ವವನ್ನು ಸಾರುವ ಕಿರು ನಾಟಕ ಪ್ರದರ್ಶಿಸಲಾಯಿತು. ಇದರೊಂದಿಗೆ ಹಠಾತ್ ಹೃದಯ ಮತ್ತು ಉಸಿರಾಟ ಸ್ಥಂಭನವಾದಾಗ ಕೈಗೊಳ್ಳುವ ಪ್ರಾಥಮಿಕ ಕಾರ್ಯಗಳ ಮಾಹಿತಿ ಕಾರ್ಯಾಗಾರ(ಸಿಪಿಆರ್), ಗರ್ಭಿಣಿಯರ ಪೋಷಕ ಆಹಾರ ಸೇವನೆ ಬಗ್ಗೆ ಆಹಾರ ತಜ್ಙರಿಂದ ಸಲಹೆ ಹಾಗೂ ಪ್ರಾತ್ಯಕ್ಷಕೆ, ರಕ್ತದೊತ್ತಡ ಮತ್ತು ಶುಗರ್ ಪರೀಕ್ಷೆ ನಡೆಸಲಾಯಿತು.
ಸೀನಿಯರ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ವಿಜಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
