ಗಾಂಜಾ ಸೇವನೆ ಆರೋಪ: ಇಬ್ಬರ ಬಂಧನ
Update: 2025-04-09 21:55 IST

ಮಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಯುವಕರನ್ನು ಉರ್ವ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸಂಜೆ 6:30ಕ್ಕೆ ಗಸ್ತು ನಿರತರಾಗಿದ್ದ ವೇಳೆ ದಂಬೆಲ್ ಸೇತುವೆ ಬಳಿ ಸಾರ್ವಜನಿಕ ರಸ್ತೆಬದಿಯಲ್ಲಿ ಯುವಕ ರಿಬ್ಬರು ಸಿಗರೇಟ್ ಸೇದುತ್ತಾ ನಿಂತಿದ್ದರು. ಸಂಶಯಗೊಂಡು ಅವರ ಬಳಿ ತೆರಳಿದಾಗ ಸಿಗರೇಟನ್ನು ಚರಂಡಿಗೆ ಬಿಸಾಡಿದರು. ಕೈಕಂಬ ಪಾಂಪೈ ಚರ್ಚ್ ಸಮೀಪದ ಶಯನ್ ಪೂಜಾರಿ (20) ಮತ್ತು ಅಲೆನ್ ಡೇವಿಡ್ ಸಿಕ್ವೇರಾ (20) ಎಂಬವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಗಾಂಜಾವನ್ನು ಸಿಗರೇಟಿನೊಳಗೆ ತುಂಬಿಸಿ ಸೇದಿರುವುದನ್ನು ಒಪ್ಪಿಕೊಂಡಿದ್ದಾರೆ. ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರಿಬ್ಬರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.