ಮಂಗಳೂರು ಶಿಕ್ಷಕರ ಸಹಕಾರಿ ಸಂಘದಿಂದ ಕಾರ್ಯಾಗಾರ

ಮಂಗಳೂರು,ಎ.10:ಶಿಕ್ಷಣ,ಶಿಕ್ಷಕ,ಶಿಸ್ತು ಇವು ಪರಸ್ಪರ ಹೊಂದಿಕೊಂಡು ಕಾರ್ಯಪ್ರವೃತ್ತರಾದಾಗ ಸಮುದಾಯವು ಬಲಿಷ್ಠ ಗೊಳ್ಳುತ್ತದೆ. ಸಮುದಾಯದ ಯಾವುದೇ ವ್ಯಕ್ತಿಯಾಗಲಿ ಶಿಕ್ಷಕ ಎಂಬ ಪದಕ್ಕೆ ಸೆಲೆಯಾಗುತ್ತಾನೆ. ಶಿಕ್ಷಕರು ಶಿಸ್ತಿನಿಂದ ಕಾರ್ಯಪ್ರವೃತ್ತರಾದರೆ ಬಲಿಷ್ಠವಾದ ಸಮಾಜವನ್ನು ಕಟ್ಟಬಹುದು ಎಂದು ಪ್ರಾಧ್ಯಾಪಕ ಸಿ.ಎ. ಉದಯಾನಂದ ಅಭಿಪ್ರಾಯಪಟ್ಟರು.
ಮಂಗಳೂರು ಶಿಕ್ಷಕರ ಸಹಕಾರಿ ಪತ್ತಿನ ವತಿಯಿಂದ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿ ಸಭಾಂಗಣದಲ್ಲಿ ಸಂಘದ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗಕ್ಕೆ ನಡೆದ ಆಡಳಿತಾತ್ಮಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯ ಅಧೀಕ್ಷಕ ಎಂ.ಜೆ. ಗೋಪಾಲ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸಂಘದ ಅಧ್ಯಕ್ಷ ಕೆ. ಎಂ.ಕೆ. ಮಂಜನಾಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುಹಮ್ಮದ್ ರಿಯಾಝ್, ಅಲೋಶಿಯಸ್ ಡಿಸೋಜ, ಪ್ರಮೀಳಾ, ಜಾಯ್ಸ್ ಡಿಸೋಜ, ಜಗದೀಶ್ ಶೆಟ್ಟಿ, ಲ್ಯಾನ್ಸಿ ತಾವರೋ, ತ್ಯಾಗಮ್ ಹರೇಕಳ, ರಾಧಾಕೃಷ್ಣ ರಾವ್, ನಿರ್ದೇಶಕರಾದ ಉಸ್ಮಾನ್, ಹಿಲ್ಡಾ ಕ್ಲೆಮನ್ಸಿಯಾ ಪಿಂಟೋ, ರೀಟಾ ಕಾಟಿಪಳ್ಳ, ವಾಣಿ, ವನಿತಾ ಸುರೇಶ್, ತಿಪ್ಪೋಜಿ, ವಾಸುದೇವ ರಾವ್, ಅಂಬರೀಶ್, ಚಂದ್ರಶೇಖರ್, ರೂಪಾಕ್ಷ, ವಾಸುದೇವರಾವ್, ಸಂಘದ ಕಾರ್ಯನಿರ್ವಹಣಾಧಿಕಾರಿ ಶರ್ಮಿಳ, ವಿನಯ ಉಪಸ್ಥಿತರಿದ್ದರು.
ನಿರ್ದೇಶಕ ರಘುನಾಥ್ ರಾವ್ ಪ್ರಾರ್ಥನೆಗೈದರು. ನಿರ್ದೇಶಕ ಮಾರ್ಕ್ಸ್ ಮೆಂಡೋನ್ಸ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಉದಯ ಶಂಕರ್ ವಂದಿಸಿದರು.