ಮಲಾರ್ ಪದವು-ಗಾಡಿಗದ್ದೆ ರಸ್ತೆಯ ಡಾಮಾರೀಕರಣದ ಕಾಮಗಾರಿಗೆ ಚಾಲನೆ

ಕೊಣಾಜೆ, ಎ.10: ಪಾವೂರು ಗ್ರಾಮದ ಮಲಾರ್ ಪದವು-ಗಾಡಿಗದ್ದೆ ಸಂಪರ್ಕ ರಸ್ತೆಯ ಡಾಮಾರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಪಾವೂರು ಗ್ರಾಪಂ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತ ನಾಡಿದ ಅವರು ಪಾವೂರು ಗ್ರಾಪಂ ವ್ಯಾಪ್ತಿಯಲ್ಲಿ 5 ಕೋ.ರೂ ಅನುದಾನದಲ್ಲಿ ಹಲವು ಕಾಮಗಾರಿಗಳು ಪೂರ್ಣಗೊಂಡಿದೆ. 1 ಕೋ.ರೂ.ನಲ್ಲಿ ಪಾವೂರು ಗ್ರಾಮದ ವಿವಿಧ ಪ್ರದೇಶದಲ್ಲಿ 20 ರಸ್ತೆಯ ಕಾಮಗಾರಿಯು ಒಂದು ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು ಮಾತನಾಡಿ ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ ಖಾದರ್ ಸುಮಾರು 20 ವರ್ಷಗಳಿಂದ ಪಾವೂರು ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಪಾವೂರು ಗ್ರಾಮದ ಚಿತ್ರಣ ಬದಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಯು.ಟಿ. ಖಾದರ್‌ರ ವಿಶೇಷ ಅನುದಾನದಲ್ಲಿ ಪಾವೂರು ಗ್ರಾಮ ಇನಷ್ಟು ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಪಾವೂರು ಗ್ರಾ.ಪಂ ಉಪಾಧ್ಯಕ್ಷೆ ಮೆಹರುನ್ನಿಸಾ ಬಶೀರ್, ಸದಸ್ಯರಾದ ದಯಾನಂದ ಪೂಜಾರಿ, ಮಾಜಿ ಸದಸ್ಯರಾದ ವಿವೇಕ್ ರೈ, ಎಂ.ಪಿ ಹಸನ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರು, ಕಾಂಗ್ರೆಸ್‌ಗ್ರಾಮ ಸಮಿತಿ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಲೀಲ್ ಬ್ರೈಟ್, ಝಕರಿಯಾ ಮಲಾರ್ ಉಪಸ್ಥಿತರಿದ್ದರು.