ಮಂಗಳೂರು: ಏಕತೆಯ ಸಂಕೇತವಾಗಿ ತೈಲಗಳ ಪವಿತ್ರೀಕರಣ ಬಲಿಪೂಜೆ

ಮಂಗಳೂರು: ಮಂಗಳೂರು ಧರ್ಮಪ್ರಾಂತ ವ್ಯಾಪ್ತಿಯಲ್ಲಿ ಪವಿತ್ರವಾರದ ಮುಂಚಿತವಾಗಿ ಪ್ರತಿವರ್ಷ ಧಾರ್ಮಿಕ ಭಕ್ತಿಯಿಂದ ಜರಗುವ ತೈಲಗಳ ಪವಿತ್ರೀಕರಣ ಬಲಿಪೂಜೆ (ಕ್ರಿಸಮ್ ಮಾಸ್) ಗುರುವಾರ ನಗರದ ರೋಸಾರಿಯೊ ಚರ್ಚ್‌ನಲ್ಲಿ ಧರ್ಮಾಧ್ಯಕ್ಷ ಆತೀ ವಂದನೀಯ ಪೀಟರ್ ಪಾವ್ಲ್ ಸಲ್ದಾನ್ಹಾ ಅವರ ನೇತೃತ್ವವದಲ್ಲಿ ನಡೆಯಿತು.
ಪ್ರತೀ ಯಾಜಕನು, ಪವಿತ್ರ ತೈಲಗಳ ಕಾವಲುಗಾರ. ಪ್ರತೀ ಯಾಜಕನು ಕ್ರಿಸ್ತನ ಮುಖವನ್ನೂ, ವಾಕ್ಯ ವನ್ನೂ ಪ್ರತಿನಿಧಿಸುತ್ತಾನೆ. ಅವನ ಕೈಗಳು ಗಾಯಗುಣಪಡಿಸುವ ಶಕ್ತಿ ಹೊಂದಿದ್ದು, ಅವು ದಿವ್ಯಸಂಸ್ಕಾರ ಗಳ ಸೇವೆಗೆ ಮೀಸಲಾಗಿದೆ. ಯಾಜಕತ್ವವು ಕ್ರಿಸ್ತನ ಪ್ರೀತಿಯ ಹೃದಯವಾಗಿದೆ. ಆದು ಸದಾ ನಿಶ್ಕಲ್ಮಷ ಮತ್ತು ನಿರ್ದೋಷ ಪೂರಿತವಾಗಿದ್ದರೆ ಮಾತ್ರ ಯಜಕತ್ವದ ಘನತೆ ಹೆಚ್ಚುವುದು ಧರ್ಮಾಧ್ಯಕ್ಷರು ಸಂದೇಶ ನೀಡಿದರು.
ಬಲಿಪೂಜೆಯ ವೇಳೆ ಧರ್ಮಾಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದ ಧರ್ಮಗುರುಗಳನ್ನು ಅವರ ಯಾಜಕ ಆಭೀಷೇಕದ ಪ್ರತಿಜ್ಞೆಗಳನ್ನು ಪುನರ್ ದೃಢಪಡಿಸಲು ಆಹ್ವಾನಿಸಿದರು. ಆರಂಭಿಕ ಅಭಿಷೇಕದ ದಿನ ಮಾಡಿದ ಪ್ರತಿಜ್ಞೆಗಳನ್ನು ಪುನಃ ನವೀಕರಿಸಿ, ಭಕ್ತಿಯಿಂದ ತಮ್ಮ ಕರ್ತವ್ಯಗಳನ್ನು ನಿಭಾಯಿಸುವ ಸಂಕಲ್ಪ ವನ್ನು ವ್ಯಕ್ತಪಡಿಸಿದರು.