ಸುರತ್ಕಲ್: ಮಾದಕ ವಸ್ತು ಮಾರಾಟ ಪ್ರಕರಣ; ಮೂವರು ಆರೋಪಿಗಳ ಬಂಧನ

ಸುರತ್ಕಲ್: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕ ಎಂಬಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಬಂದಿದ್ದ ಮೂವರನ್ನು ಮಾಲು ಸಹಿತಿ ಸಿಸಿಬಿ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.
ಬಂಧಿತರನ್ನು ದೇರಳಕಟ್ಟೆ ಕೀನ್ಯಾ ನಿವಾಸಿ ಆಸಿಫ್ ( 24), ಮುಕ್ಕ ಕಸ್ತೂರಿ ಮಿಲ್ ಬಳಿಯ ನಿವಾಸಿ ಅಸ್ಗರ್ ಅಲಿ (31), ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ ರಾಶಿಮ್ (24), ಬೆಂಗಳೂರು ನಿವಾಸಿ ರೆಹ್ಮಾನ್ ಮತ್ತು ವಿದೇಶಿ ಪ್ರಜೆ ಅಲೆನ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರಿಂದ 7ಲಕ್ಷ ರೂ. ಮೌಲ್ಯದ ಇನ್ನೋವಾ ಕಾರು, 1ಲಕ್ಷ ರೂ. ಮೌಲ್ಯದ ಮಾಧಕ ವಸ್ತು ಎಂಡಿಎಂಎ ಹಾಗೂ ಮೊಬೈಲ್ ಹಾಗೂ ನಗದು ಸೇರಿ ಒಟ್ಟು ಒಟ್ಟು 44ಸಾವಿರ ರೂ. ಮೌಲ್ಯದ ಸೊತ್ತು ಗಳು ಸೇರಿದಂತೆ ಒಟ್ಟು 8.44 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.
ಆರೋಪಿಗಳ ಪೈಕಿ ಆಸಿಫ್, ಅಸ್ಗರ್ ಅಲಿ, ರಾಶಿಮ್ ನನ್ನು ವಶಕ್ಕೆ ಪಡೆದು ಕೊಂಡು ವಿಚಾರಿಸಿದಾಗ ತಪ್ಪುಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದಂತೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ವಿದೇಶಿ ಪ್ರಜೆ ಅಲೆನ್ ಮತ್ತು ಬೆಂಗಳೂರು ನಿವಾಸಿ ರೆಹ್ಮಾನ್ ನ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.
ಆರೋಪಿಗಳು ಮುಕ್ಕ ಮಾಲೆಮಾರ್ ನ ಅಗ್ರಜ ಕಟ್ಟಡದ ಬಳಿ ಕಾರೊಂದರಲ್ಲಿ ಬಂದು ಮಾಧಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಘಟಕದ ಪೊಲೀಸ್ ಉಪ ನಿರೀಕ್ಷಕ ಶರಣಪ್ಪ ಭಂಡಾರಿ ಅವರಿಗೆ ಬಂದ ಖಚಿತ ಮಾಹಿತಿಯಂತೆ ಸಿಸಿಬಿ ಪೊಲೀಸರು ಖಾಸಗಿ ವಾಹನದಲ್ಲಿ ಬಂದು ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸ್ ಉಪ ನಿರೀಕ್ಷಕ ಶರಣಪ್ಪ ಭಂಡಾರಿ ಅವರು ನೀಡೊದ ದೂರಿನಂತೆ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.