ಉಳ್ಳಾಲ ಉರೂಸ್: ವಿವಿಧ ಇಲಾಖಾಧಿಕಾರಿಗಳ ಸಮಾಲೋಚನಾ ಸಭೆ

ಉಳ್ಳಾಲ : ದ.ಕ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಉಳ್ಳಾಲ ದರ್ಗಾ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿ 26 ದಿನಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮ ದಲ್ಲಿ ವಿವಿಧ ರಾಜ್ಯಗಳ ಭಕ್ತಾದಿಗಳು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಜವಾಬ್ದಾರಿ ಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಸೂಚನೆ ನೀಡಿದರು.
ಅವರು ಉಳ್ಳಾಲ ಉರೂಸ್ ಪ್ರಯುಕ್ತ ವಿವಿಧ ಇಲಾಖೆಗಳ ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಉರೂಸ್ ಕಾರ್ಯಕ್ರಮ ದಲ್ಲಿ ಸಣ್ಣ ಎಡವಟ್ಟಿನಿಂದ ಕಾನೂನು ಉಲ್ಲಂಘನೆ ಆಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ಶೀಘ್ರ ಇತ್ಯರ್ಥ ಪಡಿಸಬೇಕು, ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರಿಗೆ ಬಸ್ ಸೇವೆ ಇರಬೇಕು, ಸ್ವಚ್ಚತೆ ಕಾಪಾಡಬೇಕು, ಎಲ್ಲಾ ಧರ್ಮದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಕಾರಣ ಯಾವುದೇ ಸಮಸ್ಯೆ ಬರಬಾರದು, ಉಳ್ಳಾಲ ದರ್ಗಾಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಇದೆ. ಅದು ಉಳಿಯಬೇಕು ಎಂದರು.
ಸ್ಪೀಕರ್ ಯುಟಿ ಖಾದರ್ ಮಾತನಾಡಿ, ಉಳ್ಳಾಲ ದರ್ಗಾಕ್ಕೆ ಕೇಂದ್ರ ದಲ್ಲೇ ಉತ್ತಮ ಹೆಸರಿದೆ. ಎಲ್ಲಾ ಧರ್ಮ ದ ಜನರು ಭಾಗವಹಿಸುವ ಸಹೋದರತೆಯ ಕೇಂದ್ರ. ಶೈಕ್ಷಣಿಕ ಕೇಂದ್ರ ಹೊಂದಿರುವ ಉಳ್ಳಾಲ ದರ್ಗಾದ ಉರೂಸ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ ರಸ್ತೆಗಳು ಶೀಘ್ರ ದುರಸ್ತಿ ಆಗಬೇಕು.ಹೊಂಡಗಳು ಇರಬಾರದು. ಪೂರ್ಣಗೊಳಿಸಬೇಕು.ಮಾಸ್ತಿಕಟ್ಟೆಯಲ್ಲಿ ಬಾಕಿ ಉಳಿದಿರುವ ಇಂಟರ್ ಲಾಕ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಎಂದು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಕ್ತಾದಿಗಳು ಜಾಸ್ತಿ ಇರುವುದರಿಂದ ಯಾವುದೇ ಟ್ರಾಫಿಕ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು. ಸಂಚಾರದಲ್ಲಿ ಬದಲಾವಣೆ ಮಾಡಿ ವ್ಯವಸ್ಥೆ ಮಾಡಬೇಕು.ಸಿ.ಸಿಟಿವಿ ಅಳವಡಿಕೆ ಮಾಡಬೇಕು. ಕಾನೂನು ಕ್ರಮಕ್ಕೆ ಅಡಚಣೆ, ತೊಂದರೆ ಇದ್ದಲ್ಲಿ ಮಾಹಿತಿ ನೀಡುವಂತೆ ಕಮಿಷನರ್ ಅನುಪಮ್ ಅಗರವಾಲ್ ಗೆ ಸೂಚನೆ ನೀಡಿದರು.
ಆಂಬುಲೆನ್ಸ್, ವೀಲ್ ಚೇರ್ ಸಹಿತ ಆರೋಗ್ಯ ಕ್ಕೆ ಎಲ್ಲಾ ವ್ಯವಸ್ಥೆ ಮಾಡುವಂತೆ ಆರೋಗ್ಯಾಧಿಕಾರಿ ಗೆ ಸೂಚನೆ ನೀಡಿದರು.
ಉರೂಸ್ ಸಂದರ್ಭದಲ್ಲಿ ವಿದ್ಯುತ್ ಅಡಚಣೆ ಆಗದಂತೆ ಬೇಕಾದ ವ್ಯವಸ್ಥೆ ಈಗಲೇ ಮಾಡಬೇಕು. ಬೇಕಿದ್ದಲ್ಲಿ ಒಂದು ಟ್ರಾನ್ಸ್ ಫಾರ್ಮರ್ ಅಳವಡಿಸಿ. ವಿದ್ಯುತ್ ಸರಬರಾಜು ನಲ್ಲಿ ನ್ಯೂನತೆಗಳು ಇದೆಯಾ ಎಂಬುದನ್ನು ಪರಿಶೀಲನೆ ನಡೆಸಿ ವ್ಯವಸ್ಥೆ ಮಾಡುವಂತೆ ಮೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ದಯಾನಂದ ಅವರಿಗೆ ಸೂಚನೆ ನೀಡಿದರು. ದೂರದೂರಿನಿಂದ ಸರ್ಕಾರಿ ನಿಯೋಜನೆ ಮಾಡುವಂತೆ ಕೆಎಸ್ಸಾರ್ಟಿಸಿ ಅಧಿಕಾರಿಗೆ ಸೂಚಿಸಿದರು.
ಅಗ್ನಿ ಶಾಮಕ ದಳ ಉರೂಸ್ ಸಂದರ್ಭದಲ್ಲಿ ಉಳ್ಳಾಲ ದಲ್ಲಿ ನಿಯೋಜನೆ ಮಾಡಿ . ಯಾವುದೇ ಶುಲ್ಕ ವಿಧಿಸುವುದು ಬೇಡ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗೆ ಸ್ಪೀಕರ್ ಯುಟಿ ಖಾದರ್ ಸೂಚನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅವರು ಉಳ್ಳಾಲ ದರ್ಗಾ ವತಿಯಿಂದ ಆರೋಗ್ಯ, ಶೈಕ್ಷಣಿಕ, ಸಹಿತ ವಿವಿಧ ಸಮಸ್ಯೆ ಗಳಿಗೆ ನೀಡುತ್ತಿರುವ ನೆರವು, ಸೇವೆ ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ನಗರ ಸಭೆ ಪೌರಾಯುಕ್ತ ಮತಡಿ, ಅಧ್ಯಕ್ಷ ಶಶಿ ಕಲ, ಉಪಾಧ್ಯಕ್ಷ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್, ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ನಾಸೀರ್ ಅಹ್ಮದ್ ಲಕ್ಕಿ ಸ್ಟಾರ್, ವಾರ್ತಾಧಿಕಾರಿ ಖಾದರ್ ಷಾ, ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು, ತಹಶೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್, ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ್, ವಕ್ಫ್ ಅಧಿಕಾರಿ ಅಬೂಬಕ್ಕರ್,ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಕಾಂಗ್ರೆಸ್ ಮುಖಂಡ ವಿನಯ ರಾಜ್, ಮೇಸ್ಕಾಂ ಕಾರ್ಯ ನಿರ್ವಾಹಕ ಅಧಿಕಾರಿ ದಯಾನಂದ್ , ಉಳ್ಳಾಲ ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ರಫೀಕ್ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ, ಪದ್ಮರಾಜ್, ಉಳ್ಳಾಲ ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿಗರ, ಇಸಾಕ್ ಮೇಲಂಗಡಿ,ಕೋಶಾಧಿಕಾರಿ ನಾಝೀಮ್ ಮುಕಚೇರಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.