ಪಿ.ಎ. ಕಾಲೇಜಿನಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

Update: 2025-04-15 18:21 IST
ಪಿ.ಎ. ಕಾಲೇಜಿನಲ್ಲಿ ರಕ್ತದಾನ ಶಿಬಿರ ಉದ್ಘಾಟನೆ
  • whatsapp icon

ಕೊಣಾಜೆ: ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನವಾಗಿದ್ದು, ಅದು ಇನ್ನೊಂದು ಜೀವ ಉಳಿಸುವುದಲ್ಲದೆ ರಕ್ತದಾನ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ದ.ಕ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ವೈದ್ಯಕೀಯ ಅಧಿಕಾರಿಗಳಾದ ಡಾ. ಸುಖೇಶ್ ಹೇಳಿದರು.

ಅವರು ಪಿ.ಎ‌.ಕಾಲೇಜಿನ ಯೂತ್ ರೆಡ್ ಕ್ರಾಸ್, ಎನ್.ಎಸ್.ಎಸ್. ಮತ್ತು ಐ.ಕ್ಯೂ.ಎ.ಸಿ ವತಿಯಿಂದ ಲೇಡಿಗೋಶನ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್, ರೆಡ್ ಕ್ರಾಸ್ ಸೊಸೈಟಿ ಇದರ ಸಹಭಾಗಿತ್ವದಲ್ಲಿ ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಜ್ ಜೆ ಹಾಸಿಂ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಅತಿಥಿಗಳಾದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ. ಜಿಲ್ಲೆಯ ನಿರೂಪಕರಾದ ಪ್ರವೀಣ್ ಕುಮಾರ್, ಇಕೋಲಾಬ್ ಕೆ.ಎಸ್‌.ಎ. ಇದರ ಮಾಜಿ ಸೇಲ್ಸ್ ಎಂಡ್ ಮಾರ್ಕೆಟಿಂಗ್ ಮ್ಯಾನೇಜರ್ ಅಬ್ಬಾಸ್ ಉಚ್ಚಿಲ್, ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರಾದ ಡಾ.ರಮೀಝ್ ಎಂ ಕೆ, ಪಿ.ಎ ಇನ್ಸ್ಟಿಟ್ಯೂಟ್ ಆಫ್ ಪಿಸಿಯೋಥೆರಪಿಯ ಪ್ರಾಂಶುಪಾಲರಾದ ಅಫೀಫ, ಪಿ.ಎ ಪಾಲಿಟೆಕ್ನಿಕ್ ಉಪ ಪ್ರಾಂಶುಪಾಲರಾದ ಪ್ರೊ. ಇಸ್ಮಾಯಿಲ್ ಖಾನ್, ಪಿ.ಎ.ಇ.ಟಿಯ ಖರೀದಿ ವ್ಯವಸ್ಥಾಪಕರಾದ ಹಾರೀಸ್ ಟಿ.ಡಿ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು, ಯೂತ್ ರೆಡ್ ಕ್ರಾಸಿನ ನಿರ್ವಾಹಕರಾದ ಸಾರ ಮಸ್ಕುರುನ್ನೀಸ, ಡಾ. ಶಿಜಿನ್ ಎನ್, ಎನ್.ಎಸ್‌.ಎಸ್‌ ನಿರ್ವಾಹಕರಾದ ಚೈತ್ರಾ ಎನ್‌‌.ವಿ‌., ಇತಾಶ್ರೀ, ಐ.ಕ್ಯೂ.ಎ.ಸಿ ಯ ನಿರೂಪಕರಾದ ವಾಣಿಶ್ರೀ ವೈ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಶಫ್ನಾ ಶಿರೀನ್ ಸ್ವಾಗತಿಸಿ, ಫೌಝ ಫಾತಿಮ ವಂದಿಸಿದರು‌. ಹಿಬಾ ಮರಿಯಂ ಕಾರ್ಯಕ್ರಮವನ್ನು ನಿರೂಪಿಸಿದರು. 150 ದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News