ಎಎಸ್ಸೈ ವೇಣುಗೋಪಾಲ್ ರಾವ್ ನಿಧನ
Update: 2025-04-16 21:59 IST

ಮಂಗಳೂರು, ಎ.16: ಸಿಎಸ್‌ಬಿ ಎಎಸ್ಸೈ ವೇಣುಗೋಪಾಲ್ ರಾವ್ ಪಿಲಿಕುಂಜೆ ಬಹುಮಾನ್ (54) ಅಸೌಖ್ಯದಿಂದ ಬುಧವಾರನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.
1993ರಲ್ಲಿ ಪೊಲೀಸ್ ಇಲಾಖೆಯ ಸೇವೆಗೆ ಸೇರ್ಪಡೆಗೊಂಡಿದ್ದ ವೇಣುಗೋಪಾಲ್ ಮೂಲ್ಕಿ, ಪುತ್ತೂರು, ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಿದ್ದರು. ಎಸ್‌ಪಿ, ಪೊಲೀಸ್ ಆಯುಕ್ತರ ಗನ್‌ಮ್ಯಾನ್ ಆಗಿದ್ದರು.
ಇತ್ತೀಚೆಗೆ ಮಂಗಳೂರು ಪೊಲೀಸ್ ಆಯುಕ್ತರ ನಗರ ವಿಶೇಷ ಘಟಕದಲ್ಲಿ (ಸಿಎಸ್‌ಬಿ) ಸೇವೆಗೆ ನಿಯೋಜನೆಗೊಂಡಿದ್ದರು.