ವರ್ಷಾಂತ್ಯಕ್ಕೆ ಮಂಗಳೂರು-ತಿರುವನಂತಪುರ ವಂದೇ ಭಾರತ್ ರೈಲು ಆರಂಭ

Update: 2025-04-16 22:01 IST
ವರ್ಷಾಂತ್ಯಕ್ಕೆ ಮಂಗಳೂರು-ತಿರುವನಂತಪುರ ವಂದೇ ಭಾರತ್ ರೈಲು ಆರಂಭ
  • whatsapp icon

ಮಂಗಳೂರು, ಎ.16: ತಿರುವನಂತಪುರಂ-ಮಂಗಳೂರು ನಡುವೆ ವಂದೇ ಭಾರತ್ ಸ್ಲೀಪರ್ ರೈಲು 2025ರ ಕೊನೆಯಲ್ಲಿ ಆರಂಭಗೊಳ್ಳಲಿದೆ.

16 ಬೋಗಿಗಳ ಹೈ-ಸ್ಪೀಡ್ ಸ್ಲೀಪರ್ ರೈಲು ದಕ್ಷಿಣ ರೈಲ್ವೆ ವಲಯದ ಭಾಗವಾಗಲಿದೆ.

ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ವಿನ್ಯಾಸಗೊಳಿಸಿದ ಮತ್ತು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ನಿರ್ಮಿಸಿರುವ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ 1,128 ಪ್ರಯಾಣಿಕರಿಗೆ ಸಂಚರಿಸಲು ಅವಕಾಶ ಇರುತ್ತದೆ. ಆಧುನಿಕ ಹವಾನಿಯಂತ್ರಿತ ಸ್ಲೀಪರ್ ಬರ್ತ್‌ಗಳು ಸ್ವಯಂಚಾಲಿತ ಬಾಗಿಲುಗಳು, ಸುರಕ್ಷತಾ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News