ಹಿರಾ ಕಾಲೇಜು: ಪದವಿ ಪ್ರದಾನ ಸಮಾರಂಭ

ಉಳ್ಳಾಲ: ಪದವಿ ಪ್ರದಾನ ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ. ಪೋಷಕರ ಸಮ್ಮುಖದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ. ದೇಶದಲ್ಲಿ ಐದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ನಿಟ್ಟೆ ಉಪಕುಲಪತಿ ಪ್ರೊ.ಡಾ . ಎಂ.ಎಸ್ ಮೂಡಿತ್ತಾಯ ಹೇಳಿದರು.
ಅವರು ಹಿರಾ ಮಹಿಳಾ ಕಾಲೇಜು ಇದರ 2023-24 ಸಾಲಿನ ವಿದ್ಯಾರ್ಥಿ ಗಳ ಪದವಿ ಪ್ರದಾನ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣದಲ್ಲಿ ವಿದ್ಯಾರ್ಥಿನಿ ಯರು ಮೇಲುಗೈ ಸಾಧಿಸಿದ್ದಾರೆ.ಇಂದಿನ ಯುಗದಲ್ಲಿ ಪ್ರತಿಭಾವಂತ ರನ್ನು ಕೊಡುಗೆಯಾಗಿ ನೀಡುವಿ ದೇಶವಾಗಿ ಭಾರತ ಮುನ್ನುಗ್ಗುತ್ತಿದೆ.ವಿದ್ಯಾರ್ಥಿಗಳದೊಡ್ಡ ಕನಸು ಆಗಿರುವ ಶಿಕ್ಷಣ ಕ್ಕೆ ಭಾರತ ಒತ್ತು ಕೊಡುತ್ತಿದೆ ಎಂದರು.
ಮಣಿಪಾಲ ಮಾಹೆ ವಿವಿ ಸಂಶೋಧನಾ ಸಹವರ್ತಿ ಹಮ್ನಾ ಕೌಸರ್ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿ, ಇಸ್ಲಾಂ ಧಾರ್ಮಿಕ ಹಾಗೂ ಲೌಕಿಕ ಎರಡು ಶಿಕ್ಷಣ ಕ್ಕೆ ಮಹತ್ವ ನೀಡಿದೆ. ಹಕ್ಕಿಗಳಿಗೆ ಎರಡು ರೆಕ್ಕೆ ಇದ್ದಂತೆ ವಿದ್ಯಾರ್ಥಿಗಳಿಗೆ ಎರಡು ಬಗೆ ಶಿಕ್ಷಣ ಇದ್ದರೆ ಮಾತ್ರ ಯಶಸ್ಸು ಆಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ 2022-23 ಹಾಗೂ 2023-24 ನೇ ಸಾಲಿನಲ್ಲಿ ಬಿಕಾಂ ಪದವಿ ತೇರ್ಗಡೆ ಹೊಂದಿದ ಒಟ್ಟು 56 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಯಿತು.
ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ2022-23 ಸಾಲಿನ ಹಲೀಮ ಝಿಕ್ರಾ, 2023-24 ಸಾಲಿನ ನೀಮಾ ಅಬ್ದುಲ್ ರಹಿಮಾನ್, ಆಯಿಶಾ ಸಿಬಾ ಹಾಗೂ ಫಾತಿಮಾ ರಮಿಯತ್ ಬಾನು ಅವರನ್ನು ಗೌರವಿಸಲಾಯಿತು.
ಶಾಂತಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಎಚ್ ಮೆಹಮೂದ್, ಪ್ರದಾನ ಕಾರ್ಯದರ್ಶಿ ಅಬ್ದುಲ್ ಕರೀಂ, ಡಾ.ಮಹಮ್ಮದ್ ಮುಬೀನ್, ನಿಟ್ಟೆ ವಿವಿ ಉಪಕುಲಪತಿ ಪ್ರೊ.ಎಂ ಎಸ್ ಮೂಡಿತ್ತಾಯ ಪದವಿ ಪ್ರದಾನ ಮಾಡಿದರು.
ಶಾಂತಿ ಎಜುಕೇಷನ್ ಟ್ರಸ್ಟ್ ನ ಟ್ರಸ್ಟೀಮೊಹಮ್ಮದ್ ಮುಬೀನ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ದಲ್ಲಿ ಶಾಂತಿ ಎಜುಕೇಷನ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಕೆ.ಎಂ.ಶರೀಪ್, ಜೊತೆ ಕಾರ್ಯದರ್ಶಿ ಮೊಹಮ್ಮದ್ ಇಲ್ಯಾಸ್,ಉಪಾಧ್ಯಕ್ಷ ಕೆ.ಎಂ.ಅಶ್ರಫ್, ಕೋಶಾಧಿಕಾರಿ ಕೆ.ಎಂ.ಶರೀಫ್, ಸಂಚಾಲಕ ರಾದ ರಹ್ಮತುಲ್ಲಾಹ್, ಅಬ್ದುಲ್ ರಹಿಮಾನ್, ಆಡಳಿತಾಧಿಕಾರಿ ಝಾಕೀರ್ ಹುಸೈನ್, ಟ್ರಸ್ಟೀ ಗಳಾದ ಅಬ್ದುಲ್ ಖಾದರ್ ಯು. ಎ., ಸಾಜಿದಾ ಮೊಮಿನ್, ವಾಣಿಜ್ಯ ವಿಭಾಗದ ಎಚ್ ಒಡಿ ಫರ್ಹಾನ, ಹಿರಾ ಪಿಯು ಕಾಲೇಜು ಪ್ರಾಂಶುಪಾಲ ಫಾತಿಮಾ ಮೆಹರೂನ್,ಹಿರಾ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.
ಸಲ್ಮಾ ಶಮಾ,ಹಲೀಮಾ ನೌಶೀನ್ ಕಾರ್ಯಕ್ರಮ ನಿರೂಪಿಸಿದರು. ಹಿರಾ ಪದವಿ ಕಾಲೇಜು ಪ್ರಾಂಶುಪಾಲ ಆಯಿಶಾ ಅಸ್ಮೀನ್ ಸ್ವಾಗತಿಸಿದರು.