ವಿಟ್ಲ: ಪಕ್ಷ ವಿರೋಧಿ ಚಟುವಟಿಕೆ ಆರೋಪ; ಕಾಂಗ್ರೆಸ್ ಬೆಂಬಲಿತ ಮೂವರ ಉಚ್ಚಾಟನೆ ರದ್ದು

Update: 2025-04-17 19:14 IST
ವಿಟ್ಲ: ಪಕ್ಷ ವಿರೋಧಿ ಚಟುವಟಿಕೆ ಆರೋಪ; ಕಾಂಗ್ರೆಸ್ ಬೆಂಬಲಿತ ಮೂವರ ಉಚ್ಚಾಟನೆ ರದ್ದು
  • whatsapp icon

ವಿಟ್ಲ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ‌ ಆರೋಪದಲ್ಲಿ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮ ಪಂಚಾಯತ್ ನ ಮೂವರು ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಮುಂದಿನ ಆರು ವರ್ಷದ ವರೆಗೆ ಉಚ್ಚಾಟನೆ ನಡೆಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಹರೀಶ್ ಕುಮಾರ್ ನೀಡಿದ ಆದೇಶವನ್ನು ರದ್ದುಗೊಳಿಸಲಾಗಿದೆ.

ಕೊಳ್ನಾಡು ಗ್ರಾಮ ಪಂಚಾಯತಿನ ಮೂವರು ಸದಸ್ಯರುಗಳಾದ ಎಬಿ ಅಬ್ದುಲ್ಲಾ, ರಾಜೇಶ್ ಗೌಡ ಬಾರೆ ಬೆಟ್ಟು, ಮಹಮ್ಮದ್ ಮಂಚಿ, ಎಂಬವರನ್ನು ಇತ್ತೀಚೆಗೆ ಪಕ್ಷ ವಿರೋಧಿ ಚಟುವಟಿಕೆ ಮತ್ತು ಅಶಿಸ್ತಿನ ಕಾರಣದಿಂದಾಗಿ ಉಚ್ಚಾಟನೆ ಮಾಡಲಾಗಿತ್ತು ಇದೀಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಹರೀಶ್ ಕುಮಾರ್ ಅವರು ಆದೇಶ ರದ್ದು ಮಾಡಿ ಆದೇಶ ನೀಡಿದ್ದಾರೆ.‌

ಮುಂದಿನ ದಿನಗಳಲ್ಲಿ ಪಕ್ಷದ ಶಿಸ್ತು ಪಾಲನೆಯ ನಿರೀಕ್ಷೆಯಿದ್ದು, ಪಕ್ಷ ಸಂಘಟನೆಯಲ್ಲಿ ಅತ್ಯಂತ ವಿಶ್ವಾಸ ದಿಂದ ತೊಡಗಿಸಿಕೊಂಡು ಪಕ್ಷದ ಅಭಿವೃದ್ಧಿಗೆ ಶ್ರಮಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News