ಬ್ಯಾರೀಸ್ ಸಂಸ್ಥೆಗೆ ಮೈಕ್ರೋಸಾಫ್ಟ್ ಫ್ಲೋರ್ ಡೇನಿಯಲ್ ಪ್ರಶಸ್ತಿ

ಮಂಗಳೂರು: 7 ಮಿಲಿಯನ್ ಸೇಫ್ ಮ್ಯಾನ್ ಹವರ್ಸ್ ಸಾಧನೆಗೆ ಬ್ಯಾರೀಸ್ ಸಂಸ್ಥೆಗೆ ಹೈದರಾಬಾದ್‌ನ ಎಚ್‌ವೈಡಿ 01 ಮೈಕ್ರೋಸಾಫ್ಟ್ ಡಾಟಾ ಸೆಂಟರ್ ನೀಡುವ ಮೆಸರ್ಸ್ ಫ್ಲೋರ್ ಡೇನಿಯಲ್ ಪ್ರಶಸ್ತಿ ಲಭಿಸಿದೆ.
ಫ್ಲೋರ್‌ನ ರಿಚರ್ಡ್ ಮತ್ತು ಮೈಕ್ರೋಸಾಫ್ಟ್‌ನ ಎಚ್.ಪಿ. ಸಿಂಗ್ ಅವರು ಬ್ಯಾರೀಸ್ ಸಮೂಹ ಸಂಸ್ಥೆಯ ಬಾಲಸುಬ್ರಹ್ಮಣ್ಯನ್ ಮತ್ತು ತಿಲಕ್ ಸಿಂಗ್ ಅವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು.
ಕಠಿಣ ಸುರಕ್ಷತಾ ಪ್ರೋಟೋಕಾಲ್‌ಗಳು ಮತ್ತು ಔದ್ಯೋಗಿಕ ಆರೋಗ್ಯ, ಸುರಕ್ಷತೆ ಮತ್ತು ಪರಿಸರ (ಒಎಚ್‌ಎಸ್‌ಇ) ಮಾನದಂಡಗಳನ್ನು ಪರಿಗಣಿಸಿ ಗೌರವ ನೀಡಲಾಗಿದೆ.
ಬ್ಯಾರೀಸ್ ಇತ್ತೀಚೆಗೆ ವಿಶ್ವ ಸುರಕ್ಷತಾ ಸಂಸ್ಥೆ (ಡಬ್ಲ್ಯುಎಸ್‌ಒ) ಇಂಡಿಯಾ ಪ್ರಶಸ್ತಿ, ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ಫೈವ್ ಸ್ಟಾರ್ ರೇಟಿಂಗ್ ಮತ್ತು ಒಎಚ್‌ಎಸ್‌ಎಸ್‌ಎಐ ಫೌಂಡೇಶನ್ ಪ್ರಶಸ್ತಿಯನ್ನು ಸುರಕ್ಷತೆ ಮತ್ತು ಯೋಗ ಕ್ಷೇಮದ ಮೇಲೆ ನಿರಂತರವಾಗಿ ಗಮನಹರಿಸಿದ್ದಕ್ಕಾಗಿ ಪಡೆದಿದೆ. ಸಂಸ್ಥೆಯ ಉದ್ಯೋಗಿಗಳ ಬದ್ಧತೆ, ಶಿಸ್ತು ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಪ್ರಕಟನೆ ತಿಳಿಸಿದೆ.