ಮೂಡುಬಿದಿರೆ: ಭಾರೀ ಗಾಳಿ ಸಹಿತ ಮಳೆ; ಮರ ಬಿದ್ದು ಕಾರು ಜಖಂ
Update: 2025-04-22 23:34 IST

ಮೂಡುಬಿದಿರೆ: ಇಲ್ಲಿನ ಮಾರೂರು ಭಾಗದಲ್ಲಿ ಭಾರೀ ಗಾಳಿ ಸಹಿತ ಮಳೆಯಾಗಿದ್ದು, ಮರಗಳು, ವಿದ್ಯುತ್ ತಂತಿಗಳು ಧರೆಗೆ ಉರುಳಿವೆ. ಮನೆ, ಕಾರು ಜಖಂಗೊಂಡಿರುವ ಘಟನೆ ಮಂಗಳವಾರ ವರದಿಯಾಗಿದೆ.
ಮಾರೂರು ವ್ಯಾಪ್ತಿಯ ಬೀರಾವು ಎಂಬಲ್ಲಿ ರಾಷ್ಟ್ರೀ ಹೆದ್ದಾರಿ ಮೇಲೆ ಮರ ಬಿದ್ದಿದ್ದು, ಘಟನೆಯಿಂದ ಒಂದು ಕಾರು ಜಖಂಗೊಂಡಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದರಿಂದಾಗಿ ಸುಮಾರು 2ಗಂಟೆಗಳ ಕಾಲ ಮೂಡುಬಿದಿರೆ - ಬಂಟ್ವಾಳ ರಾಷ್ಟಡ್ರೀಯ ಹೆದ್ದಾರಿ ಬಂದ್ ಆಗಿತ್ತು. ರಝಾಕ್ ಎಂಬವರ ಮನೆಯ ಮೇಲೆ ಮರ ಬಿದ್ದು, ಹಾನಿ ಸಂಭವಿಸಿದೆ.
ಮಾರೂರು ವ್ಯಾಪ್ತಿಯಲ್ಲಿ ದಲಿತರ ಕಾಲನಿಯಲ್ಲಿ ವಿದ್ಯುತ್ ತಂತಿಗಳ ಮೇಲೆ ಬೃಹತ್ ಮರಬಿದ್ದು, ವಿದ್ಯುತ್ ಸಂಪರ್ಕ ಖಡಿತಗೊಂಡಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.


