ಸೈಯದ್ ಬರ್ಕತ್ ರಿಗೆ ಪಿಎಚ್ ಡಿ ಪದವಿ
Update: 2025-04-23 17:58 IST

ಮಂಗಳೂರು: ಡಾ. ಅಶ್ವತ್ಥ ನಾರಾಯಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಸೈಯದ್ ಬರ್ಕತ್ ಕೆ ಎ ಅವರು ಸಾದರಪಡಿಸಿದ “ಚರಿತ್ರೆ ಲೇಖನ ಪರಂಪರೆಯಲ್ಲಿ ಟಿಪ್ಪು ಸುಲ್ತಾನನ ಪ್ರಾತಿನಿಧಿಕರಣ-ಒಲವುಗಳು." ಎಂಬ ಮಹಾಪ್ರಬಂಧವನ್ನು ಇತಿಹಾಸ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪಿಹೆಚ್.ಡಿ ಪದವಿ ನೀಡಿದೆ.
ಅಭ್ಯರ್ಥಿಯು ಮಹಾ ಪ್ರಬಂಧವನ್ನು ಕನ್ನಡ ಭಾಷೆಯಲ್ಲಿ ಸಿದ್ಧಪಡಿಸಿರುತ್ತಾರೆ. ಸೈಯದ್ ಬರ್ಕತ್ ಕೆ. ಎ ಕೊಡಗಿನ ಕುಶಾಲನಗರದ ನಿವಾಸಿಗಳಾದ ಸೈಯದ್ ಅತಉಲ್ಲಾ ಮತ್ತು ರೇಷ್ಮಾಭಾನು ದಂಪತಿಯ ಪುತ್ರನಾಗಿದ್ದು ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿಯಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಇತಿಹಾಸ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.