ಭಯೋತ್ಪಾದನೆಯಿಂದ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ: ಕಾಂತಪುರಂ ಅಬೂಬಕರ್ ಮುಸ್ಲಿಯಾರ್

ಕಾಂತಪುರಂ ಅಬೂಬಕರ್ ಮುಸ್ಲಿಯಾರ್
ಕೋಝಿಕ್ಕೋಡ್ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಭಾರತದ ಶಾಂತಿಯುತ ಜೀವನದ ವಿರುದ್ಧದ ಹೇಯ ಆಕ್ರಮಣವಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.
ಪ್ರಪಂಚದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುವ ಸಮಯದಲ್ಲಿ ಈ ದಾಳಿಯನ್ನು ನಡೆಸಿದ್ದು, ಜನರೆಡೆಯಲ್ಲಿ ಭಯವನ್ನುಂಟು ಮಾಡಿ ಕಾಶ್ಮೀರಕ್ಕೆ ಜನರ ಹರಿವನ್ನು ನಿಲ್ಲಿಸುವುದು ಮತ್ತು ಕಾಶ್ಮೀರಿಗಳ ಬದುಕನ್ನು ತೊಂದರೆಗೆ ತಳ್ಳುವುದು ಈ ದಾಳಿಯ ಉದ್ದೇಶವಾಗಿರಬಹುದು. ಆದರೆ ಭಯೋತ್ಪಾದನೆ ಯಿಂದ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ. ಅಂತಹ ಹೀನ ಕೃತ್ಯಗಳ ಮುಂದೆ ದೇಶವು ತಲೆ ಬಾಗುವುದಿಲ್ಲ. ಅಪರಾಧಿಗಳನ್ನು ಬಂಧಿಸಿ ಉಗ್ರ ಶಿಕ್ಷೆಯನ್ನು ಖಾತ್ರಿಪಡಿಸುವುದರೊಂದಿಗೆ ಕಾಶ್ಮೀರಿಗಳ ಜೀವನವನ್ನು ಸಾಮಾನ್ಯ ಸ್ಥಿತಿಗೆ ಮರುಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಕಾಂತಪುರಂ ಹೇಳಿದರು.
ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳು ಮತ್ತು ಬಂಧು ಬಳಗಕ್ಕೆ ಗ್ರ್ಯಾಂಡ್ ಮುಫ್ತಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ.