ಕಾಶ್ಮೀರದ ಪಹಲ್ಗಾಮ್‌ನಲ್ಲಿ ಆಕ್ರಮಣ ಖಂಡನೀಯ: ಎಸ್‌ವೈಎಸ್

ಮಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯನ್ನು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ತೀವ್ರವಾಗಿ ಖಂಡಿಸಿದೆ.
ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ದೇಶ ವಿದೇಶಗಳಿಂದ ವಿವಿಧ ಜಾತಿ ಮತಗಳ ಜನರು ಬಂದು ಪ್ರಕೃತಿ ಸೌಂದರ್ಯವನ್ನು ಸವಿದು ಖುಷಿ ಖುಷಿಯಾಗಿ ಹೋಗುತ್ತಾರೆ. ಅಂತಹ ಯಾತ್ರಿಕರನ್ನು ಕೊಲ್ಲುವ, ರಾಜ್ಯದ ಶಾಂತಿಯನ್ನು ಕೆಡಹುವ ಮತ್ತು ಜನರನ್ನು ಜಾತಿ ಧರ್ಮದ ಹೆಸರಿನಲ್ಲಿ ಕಚ್ಚಾಡಿಸುವ ಹೀನ ಮನಸ್ಥಿತಿ ದಾಳಿಯ ಹಿಂದೆ ಇದೆ. ದಾಳಿಕೋರರನ್ನು ಉಗ್ರ ಶಿಕ್ಷೆಗೆ ಗುರಿ ಪಡಿಸಬೇಕು. ದಾಳಿಯ ಹಿನ್ನೆಲೆಯಲ್ಲಿ ಭಾರತೀಯರು ಪರಸ್ಪರ ಮತ ಧರ್ಮಗಳ ಹೆಸರಿನಲ್ಲಿ ಜಗಳ ಕಾಯುವ ಮೂಲಕ ಭಯೋತ್ಪಾದಕರ ಉದ್ದೇಶವನ್ನು ಯಶಸ್ಸುಗೊಳಿಸಬಾರದು. ದಾಳಿಗೊಳಗಾದವರನ್ನು ರಕ್ಷಿಸಲು ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ಕಾಶ್ಮೀರಿ ಮುಸ್ಲಿಮರು ಸೇರಿದಂತೆ ಎಲ್ಲರೂ ಒಂದಾಗಿ ಭಯೋತ್ಪಾದಕರನ್ನು ಸೋಲಿಸಬೇಕು ಎಂದು ಎಸ್ ವೈ ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಕ್ ಹೇಳಿದ್ದಾರೆ.