ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಗಮನ ಸೆಳೆದ‌ ಶೇಕ್ಸ್‌ಪಿಯರ್ ನಾಟಕ ದೃಶ್ಯಗಳ ಪಾತ್ರಾಭಿನಯ

Update: 2025-04-23 22:41 IST
ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಗಮನ ಸೆಳೆದ‌ ಶೇಕ್ಸ್‌ಪಿಯರ್ ನಾಟಕ ದೃಶ್ಯಗಳ ಪಾತ್ರಾಭಿನಯ
  • whatsapp icon

ಮಂಗಳೂರು, ಎ.23: ಶ್ರೇಷ್ಠ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ಸ್ಮರಣಾರ್ಥ ಬುಧವಾರ ಅವರ ಅತ್ಯುತ್ತಮ ನಾಟಕ ದೃಶ್ಯಗಳ ಪಾತ್ರಾಭಿನಯ ಕಾರ್ಯಕ್ರಮ ‘ಶೇಕ್ಸ್‌ಪಿಯರ್ ಅನ್‌ಪ್ಲಗ್ಡ್’ ನಗರದ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಂದ ನಡೆಯಿತು.

ಶೇಕ್ಸ್‌ಪಿಯರ್ ಜನನ ಮತ್ತು ನಿಧನದ ದಿನ ( ಜನನ ಎ.23, 1564, ಮರಣ ಎ.23, 1616)ದ ಪ್ರಯುಕ್ತ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಐಕ್ಯೂಎಸಿಯ ಸಹಯೋಗದೊಂದಿಗೆ ಕಾಲೇಜಿನ ಇಂಗ್ಲಿಷ್ ವಿಭಾಗದ ಅನ್ನೀಸ್ ಲಿಟ್ರರಿ ಕ್ಲಬ್‌ನ ಸಹಯೋಗದೊಂದಿಗೆ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಶೇಕ್ಸ್‌ಪಿಯರ್‌ನ ನಾಲ್ಕು ನಾಟಕಗಳ ಪ್ರಮುಖ ದೃಶ್ಯಗಳನ್ನು ಪ್ರದರ್ಶಿಸಲಾಯಿತು.

ರೋಮಿಯೋ ಮತ್ತು ಜೂಲಿಯೆಟ್ ನಾಟಕದ ಬಾಲ್ಕನಿ ದೃಶ್ಯ, ಮ್ಯಾಕ್‌ಬೆತ್ ನಾಟಕದ , ಮಾಟಗಾರ್ತಿಯರ ದೃಶ್ಯ, ಹ್ಯಾಮ್ಲೆಟ್ ಮತ್ತು ಒಫೀಲಿಯಾ ನಡುವಿನ ಸಂಭಾಷಣೆ ಮತ್ತು ಒಥೆಲೊ ಮತ್ತು ಡೆಸ್ಡೆಮೋನಾ ನಡುವಿನ ಮಲಗುವ ಕೋಣೆಯ ಮುಖಾಮುಖಿ. ಶೇಕ್ಸ್‌ಪಿಯರ್‌ನ ಕೃತಿಗಳಲ್ಲಿ ಕಂಡು ಬರುವ ಪ್ರೀತಿ, ಮಹತ್ವಾಕಾಂಕ್ಷೆ, ಅದೃಷ್ಟ ಮತ್ತು ದ್ರೋಹದ ವಿಷಯಗಳನ್ನು ಪ್ರತಿನಿಧಿಸುವ ನೃತ್ಯ ಪ್ರದರ್ಶನವೂ ಕಾರ್ಯಕ್ರಮದ ಭಾಗವಾಗಿತ್ತು.

ಇಂಗ್ಲಿಷ್ ವಿಭಾಗದ ಡಾ. ಗೌತಮ್ ಜ್ಯೋತ್ಸ್ನಾ ಅವರು ಈ ಕಾರ್ಯಕ್ರಮವನ್ನು ರೂಪಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಡಬ್ಲ್ಯುಎನ್‌ಇಎಸ್‌ನ ಉಪಾಧ್ಯಕ್ಷೆ ಡಾ. ಮಂಜುಳ ಕೆ.ಟಿ. ಅವರು ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.

ಡಾ. ಗೌತಮ್ ಜ್ಯೋತ್ಸ್ನಾ ಅವರು ಕಷ್ಟಕರ ವಾಸ್ತವತೆಗಳಿಗೆ ಪ್ರತಿಕ್ರಿಯೆಯಾಗಿ ಸೃಜನಾತ್ಮಕ ಅಭಿ ವ್ಯಕ್ತಿಯ ಮೇಲೆ ಶೇಕ್ಸ್‌ಪಿಯರ್ ಅವರ ಪ್ರಭಾವದ ಬಗ್ಗೆ ಮಾತನಾಡಿದರು.

ಬಿಸಿನೆಸ್ ಮತ್ತು ಅಡ್ಮಿನಿಸ್ಟ್ರೇಷನ್ ಡೀನ್ ಸೈಯದ್ ಖಾದರ್ ಅವರು ಇಂದಿನ ಪೀಳಿಗೆಗಾಗಿ ಶೇಕ್ಸ್‌ಪಿಯರ್‌ನ ಜಗತ್ತನ್ನು ಮರುಸೃಷ್ಟಿಸುವ ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರು.

ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಕುಮಾರ್ ಕೆ.ಸಿ. ಅವರು ಇಂದಿನ ವಿದ್ಯಾರ್ಥಿಗಳಿಗೆ ಶೇಕ್ಸ್‌ಪಿಯರ್‌ನ ಕೃತಿಗಳ ಮಹತ್ವವನ್ನು ತಿಳಿಸಿದರು. ಭಾಷಾ ವಿಭಾಗದ ಡೀನ್ ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ಪ್ರೀತಾ ಭಂಡಾರಿ ಅವರು ಸಮಾರೋಪ ಭಾಷಣ ಮಾಡಿದರು .

ಅಂತಿಮ ಬಿ.ಕಾಂ ವಿದ್ಯಾರ್ಥಿನಿ ರೌಧಾ ಕಾರ್ಯಕ್ರಮವನ್ನು ನಿರೂಪಿಸಿದರು.







Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News