ಉಜಿರೆ: ಪಹಲ್ಗಾಮ್ ದಾಳಿ ಖಂಡಿಸಿ ವಿಹಿಂಪ, ಬಜರಂಗ ದಳದಿಂದ ಪ್ರತಿಭಟನೆ
Update: 2025-04-24 09:22 IST

ಬೆಳ್ತಂಗಡಿ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ಉಜಿರೆ ಪೇಟೆಯಲ್ಲಿ ಬುಧವಾರ ಶ್ರದ್ಧಾಂಜಲಿ ಸಭೆ ಮತ್ತು ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮತ್ತು ನ್ಯಾಯವಾದಿ ವಸಂತ ಮರಕಡ ಮಾತನಾಡಿದರು
ಬಜರಂಗದಳ ಪುತ್ತೂರು ಜಿಲ್ಲಾ ಸಹ ಸಂಯೋಜಕರಾದ ದಿನೇಶ್ ಚಾರ್ಮಾಡಿ, ವಿಹಿಂಪ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ವಿಷ್ಣು ಮರಾಠೆ, ವಿಹಿಂಪ ಬೆಳ್ತಂಗಡಿ ಪ್ರಖಂಡ ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಬಜರಂಗದಳ ತಾಲೂಕು ಸಂಯೋಜಕ ಸಂತೋಷ್ ಅತ್ತಾಜೆ, ವಿಹಿಂಪ ತಾಲೂಕು ಗೋ ರಕ್ಷಾ ಪ್ರಮುಖ್ ರಮೇಶ್ ಧರ್ಮಸ್ಥಳ, ಬಜರಂಗದಳ ತಾಲೂಕು ಸಹ ಸಂಯೋಜಕ ಅನಂತು ಉಜಿರೆ, ವಿಹಿಂಪ ಬಜರಂಗದಳ ತಾಲೂಕು ಪ್ರಸಾರ ಪ್ರಚಾರ ಪ್ರಮುಖ್ ನಾಗೇಶ್ ಕಲ್ಮಂಜ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ ಧರ್ಮಸ್ಥಳ ಉಪಸ್ಥಿತರಿದ್ದರು.