ವಿಟ್ಲ: ಜನ್ಮಭೂಮಿ ಸಂರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ

ವಿಟ್ಲ: ದೇಶದ ಪ್ರಶ್ನೆ ಬಂದಾಗ ಜಾತಿ ಸಂಪ್ರದಾಯವನ್ನು ಬಿಟ್ಟು ಒಗ್ಗಟ್ಟಿನ ಪ್ರದರ್ಶನ ಅಗತ್ಯವಿದೆ. ಪಕ್ಕದ ದೇಶಗಳಲ್ಲಿ ಹಿಂದುವಿನ ಮೇಲೆ ದೌರ್ಜನ್ಯ ನಡೆದಾಗ ನಾವು ನಿದ್ದೆಯಲ್ಲಿದ್ದೆವು. ದೇಶದಲ್ಲಿ ಬಹುಸಂಖ್ಯಾ ತರು ಹಿಂದುವಾಗಿ ಉಳಿದಿಲ್ಲ. ನಮ್ಮ ಮೇಲೆ ನಡೆಯುತ್ತಿರುವ ದಾಳಿ ಉತ್ತರ ನೀಡುವ ಬಗ್ಗೆ ಯೋಚಿಸ ಬೇಕಾಗಿದೆ. ಹಿಂದುವಿಗೆ ಅನ್ಯಾಯ ಆದಾಗ ಬೇರೆಡೆ ಹೋಗಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿ ಲತೇಶ್ ಕುಮಾರ್ ಹೇಳಿದರು.
ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ಜನ್ಮಭೂಮಿ ಸಂರಕ್ಷಣಾ ವೇದಿಕೆ ನೇತೃತ್ವದಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ದಾಳಿಯನ್ನು ಖಂಡಿಸಿ ನಡೆದ ಬೃಹತ್ ಪ್ರತಿಭಟನಾ ಸಭೆ ಹಾಗೂ ಸಂತಾಪ ಸಭೆಯಲ್ಲಿ ಮಾತನಾಡಿದರು.
ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಇಸ್ಲಾಮ್ ರಾಷ್ಟ್ರವಾಗಿಸುವ ಆಲೋಚನೆಯಲ್ಲಿ ಹತ್ಯಾಕಾಂಡ ಗಳನ್ನು ನಡೆಸಲಾಗುತ್ತಿದೆ. ಕ್ರಾಂತಿಕಾರಿ ಹೋರಾಟದ ಮೂಲಕ ಪ್ರತಿಕಾರದಿಂದ ಉತ್ತರ ನೀಡಬೇಕಾ ಗಿದೆ. ಉಗ್ರಗಾಮಿಗಳಿಗೆ ಕೇಂದ್ರ ಸರ್ಕಾರ ಸರಿಯಾದ ವ್ಯವಸ್ಥೆಯನ್ನು ಮಾಡಲಿದೆ. ನಮ್ಮ ಭಾಗದಲ್ಲೂ ಮಿಲಿಟರಿಯವರ ರೀತಿ ಉತ್ತರ ನೀಡಲು ಸಜ್ಜಾಗಬೇಕಾಗಿದೆ. ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕಾಗಿದೆ. ದೇಶದ ಒಳಗಿದ್ದುಕೊಂಡು ದ್ರೋಹ ಎಸಗುವ ಶಕ್ತಿಗಳನ್ನು ಶಿಕ್ಷಿಸುವ ಕಾರ್ಯವಾಗ ಬೇಕು ಎಂದರು.
ಪ್ರಸನ್ನ ಮಾರ್ತಾ, ಹರೀಶ್ ಬಿಜತ್ರೆ, ಜಗನ್ನಾಥ ಸಾಲಿಯಾನ್, ದಯಾನಂದ ಶೆಟ್ಟಿ ಉಜಿರೆಮಾರು, ಹರಿಪ್ರಸಾದ್ ಯಾದವ್, ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ಕರುಣಾಕರ ನಾಯ್ತೊಟ್ಟು, ಅರುಣ್ ವಿಟ್ಲ, ನಿತಿಶ್ ಶಾಂತಿವನ, ಶ್ರೀಕೃಷ್ಣ ವಿಟ್ಲ, ಮಾಡತ್ತಾರು ಉದಯಕುಮಾರ್ ಆಲಂಗಾರು ಮತ್ತಿತರರು ಉಪಸ್ಥಿತರಿದ್ದರು.