ನಡುಪದವು: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ; ಮೊಂಬತ್ತಿ ನಡಿಗೆ

ಕೊಣಾಜೆ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಮಡಿದವರಿಗೆ ಮಂಗಳೂರು ವಿಧಾನ ಸಭಾ ಕ್ಷೇತ್ರದ ಉಳ್ಳಾಲ ತಾಲೂಕು ಎನ್.ಎಸ್.ಯು.ಐ ವತಿಯಿಂದ ಗೌರವಾರ್ಪಣೆ ಮತ್ತು ಒಗ್ಗಟ್ಟಿನ ಸಂಕೇತವಾಗಿ ಮೊಂಬತ್ತಿ ನಡಿಗೆ, ಮೌನ ಪ್ರಾರ್ಥನೆ ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡುಪದವಿನಲ್ಲಿ ನಡೆಯಿತು.

ಉಳ್ಳಾಲ ತಾಲೂಕು ಎನ್.ಎಸ್.ಯು.ಐ ಅಧ್ಯಕ್ಷ ಶಾಹಿಲ್ ಮಂಚಿಲ ಮಾತನಾಡಿ, ಭಯೋತ್ಪಾದಕರ ದಾಳಿ ಸಹಿಸಲಾಗದು. ಕೇಂದ್ರದ ಮೋದಿ ಸರಕಾರ ಭಾರತೀಯ ಜನರನ್ನು ರಕ್ಷಿಸಲು ವಿಫಲವಾಗಿದೆ ಎಂದು ಆರೋಪಿಸಿದರು.
ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ ಮಾತನಾಡಿ, ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಿರುವ ಪೈಶಾಚಿಕ ಮತ್ತು ಹೀನ ಕೃತ್ಯ ಖಂಡನೀಯ. ಭಯೋತ್ಪಾದಕರು ರಾಕ್ಷಸ ಪ್ರವೃತಿಯವರು, ವರ ಮೇಲೆ ಕೇಂದ್ರ ಸರಕಾರ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು ಪಾವೂರು, ಬಾಳೆಪುಣಿ ಗ್ರಾಪಂ ಉಪಾಧ್ಯಕ್ಷ ಸಿ.ಎಂ. ಶರೀಫ್ ಪಟ್ಟೋರಿ, ಉಳ್ಳಾಲ ತಾಲೂಕು ಪ್ರಧಾನ ಕಾರ್ಯದರ್ಶಿ ಇಫ್ತಿಕಾರ್ ಫರೀದ್, ಎನ್.ಎಸ್.ಯು.ಐ ಉಪಾಧ್ಯಕ್ಷ ದರ್ಶನ್ ಕುಂದರ್, ಅಭಿಷೇಕ್ ವಾಲ್ಮೀಕಿ, ಎನ್.ಎಸ್.ಯು.ಐ. ಉಳ್ಳಾಲ ತಾಲೂಕು ಪ್ರಧಾನ ಕಾರ್ಯದರ್ಶಿ ಅಶ್ವಿನ್ ಮತ್ತು ಮಿಹಾನ್ ಹುಸೇನ್, ಕೋಟೆಕಾರ್ ವಲಯ ಎನ್.ಎಸ್.ಯು.ಐ. ಅಧ್ಯಕ್ಷ ಫಹೀಂ ಹಾಗೂ ಅಶ್ರಫ್ ಉಲ್ಲಾಳ್, ಉಳ್ಳಾಲ ತಾಲೂಕು ಎನ್.ಎಸ್.ಯು.ಐ. ಉಪಾಧ್ಯಕ್ಷ ವಿಶಾಲ್ ಲೋಬೋ, ಸಾಮಾಜಿಕ ಜಾಲತಾಣದ ಉಸ್ತುವಾರಿ ಫಾಝಿಲ್, ಹಾಗೂ ಶಾಫಿ ನಡುಪದವು, ಶಹಲ್ ಮೊದಲಾದವರು ಉಪಸ್ಥಿತರಿದ್ದರು.
300ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಮೊಂಬತ್ತಿ ನಡಿಗೆಯಲ್ಲಿ ಪಾಲ್ಗೊಂಡಿದ್ದರು.